ಬಂಟ್ವಾಳ: ಈಚೆಗೆ  ನದಿಪ್ರವಾಹಕ್ಕೆ ಸಿಲುಕಿ ಮೃತಪಟ್ಟತಾಲೂಕಿನ ಕನ್ಯಾನ ಗ್ರಾಮದ ನಂದರಬೆಟ್ಟು ನಿವಾಸಿಯಾದ ಸತೀಶ್ ಪೂಜಾರಿಯವರ ಮನೆಗೆ  ಬಂಟ್ವಾಳ  ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ  ಸಾಂತ್ವಾನ ಹೇಳಿ ಸರಕಾರದಿಂದ ಮಂಜೂರಾದ 5 ಲಕ್ಷ ರೂ. ಪರಿಹಾರದ ಚೆಕ್‌ನ್ನು ಮೃತರ ತಂದೆ ಬಾಬು ಪೂಜಾರಿ ಅವರಿಗೆ ಹಸ್ತಾಂತರಿಸಿದರು.IMG-20200901-WA0063

ಈ ಸಂದರ್ಭದಲ್ಲಿ ಕಂದಾಯ ವೃತ್ತ ನಿರೀಕ್ಷಕರಾದ ದಿವಾಕರ ಮುಗುಳಿಯ, ವಿಟ್ಲಪಡ್ನೂರು ಗ್ರಾಮ ಪಂ. ಮಾಜಿ ಅಧ್ಯಕ್ಷ  ರವೀಶ್ ಶೆಟ್ಟಿ, ಕನ್ಯಾನ ಗ್ರಾಮ ಪಂ. ಮಾಜಿ ಅಧ್ಯಕ್ಷ ರಘುರಾಮ ಶೆಟ್ಟಿ, ಕೊಳ್ನಾಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕರೋಪಾಡಿ, ಪ್ರಮುಖರಾದ ಲೋಹಿತ್ ಕೊಳ್ನಾಡು, ಮೋಹನದಾಸ ಶೆಟ್ಟಿ, ಚಂದ್ರಶೇಖರ ಪೂಜಾರಿ, ಗ್ರಾಮ ಸಹಾಯಕ ಪರಮೇಶ್ವರ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *