ಗುರುಪುರ : ಮೋದಿಯವರು ಅದಾನಿ ಸರ್ಕಾರದ ಪ್ರಧಾನಿಯಂತೆ ವರ್ತಿಸುತ್ತಿದ್ದಾರೆ. ಕೇಂದ್ರವು ದೇಶದ ಪ್ರಮುಖ ಕ್ಷೇತ್ರಗಳ ವಹಿವಾಟು ಖಾಸಗೀಕರಣಗೊಳಿಸುತ್ತಿದೆ. ಜನ ವಿರೋಧಿ ನೀತಿಗೆ ಸಿಪಿಐಎಂ ವಿರೋಧವಿದೆ. ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ಬಿಡುಗಡೆ ಮಾಡಿದ್ದೇವೆ ಎನ್ನಲಾದ 20 ಲಕ್ಷ ಕೋಟಿ ರೂಪಾಯಿಯಲ್ಲಿ ರಾಜ್ಯದ ಬಡರೋಗಿಗಳಿಗೆ ನಯಾ ಪೈಸೆಯ ಲಾಭ ಆಗಿಲ್ಲ ಎಂದು ಸಿಪಿಐಎಂ ಮುಖಂಡ ಗಂಗಯ್ಯ ಅಮೀನ್ ಟೀಕಿಸಿದರು.gur-aug-29-cpim-3

ವಾಮಂಜೂರು ಜಂಕ್ಷನಿನಲ್ಲಿ ಆ. 28ರಂದು ಸಂಜೆ ನಡೆದ `ಮೋದಿ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಸಿಪಿಐಎಂ ಹಮ್ಮಿಕೊಂಡಿರುವ ದೇಶವ್ಯಾಪ್ತಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಸಿಪಿಐಎಂನ ಮತ್ತೋರ್ವ ಮುಖಂಡ ಮನೋಜ್ ಕುಮಾರ್ ವಾಮಂಜೂರು ಮಾತನಾಡಿ, ಮೋದಿ ಮತ್ತು ಶಾರಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯುಂಟಾಗಿದ್ದು, ದೇಶದಲ್ಲಿ ಈಗ ನಿರಂಕುಶ ಪ್ರಭುತ್ವ ಮೈದಾಳಿದೆ ಎಂದು ಆರೋಪಿಸಿದರು.

ಸಭೆಯಲ್ಲಿ ಸಿಪಿಐಎಂ ವಲಯ ಮುಖಂಡರಾದ ಇಬ್ರಾಹಿಂ, ಶೇಖರ ಗಂಪ, ಮುಂಡಪ್ಪ, ವೆಂಕಪ್ಪ, ಲಿಂಗಪ್ಪ ಸಾಲ್ಯಾನ್, ಬಾಬು ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *