ಬಂಟ್ವಾಳ: ಮುಲಾರಪಟ್ನ ಜೆ.ಎಚ್.ಎಮ್.ಫಾಂಡೇಶನ್ ವತಿಯಿಂದ ಸುಮಾರು 6 ಲಕ್ಷರೂ.ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಮನೆಯನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ರವಿವಾರ ಫಲಾನುಭವಿಗೆ ಹಸ್ತಾಂತರಿಸಿದರು. ಶಾಸಕರು ಮನೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಬಳಿಕ ಮನೆಯ ಕೀಯನ್ನು ಫಲಾನುಭವಿಗೆ ವಿತರಿಸಿದರು.ತದನಂತರ ಮಾತನಾಡಿದ ಶಾಸಕರು,ಬಡವರನ್ನು ಗುರುತಿಸಿ ಅವರಿಗೆ ಮನೆ ನಿರ್ಮಿಸಿಕೊಟ್ಟಿರುವುದು ಪಣ್ಯದ ಕಾರ್ಯವಾಗಿದೆ.ಫೌಂಡೇಶನ್ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಚಟುವಟಿಕೆಯನ್ನು ಶ್ಲಾಘಿಸಿದರು.15-43-10-IMG-20200816-WA0034-1068x601

ವಸುದೈವ ಕುಟುಂಬದ ಆಧಾರದಲ್ಲಿ ಭಾರತ ಮುನ್ನಡೆಯಿತ್ತಿದ್ದು,ಜಗತ್ತು ಒಂದೇ ಕುಟುಂಬ ಎಂಬ ದೃಷ್ಟಿಯಿಂದ ಎಲ್ಲರೂ ದೇಶದ ಪ್ರಗತಿಯಲ್ಲಿ ಕೈಜೋಡಿಸಬೇಕು ಎಂದ ಶಾಸಕರು ತಾನು  ನೀಡಿರುವ ಭರವಸೆಯಂತೆ ರಾಜಧರ್ಮವನ್ನು ಪಾಲಿಸಿಕೊಂಡು ಆಡಳಿತ ನಡೆಸುತ್ತಿದ್ದೆನೆ.ಕೊರೋನಾದ ಬಗ್ಗೆ ಜಾಗೃತೆ ವಹಿಸಿ,ಸಾಮಾಜಿಕ,ದೈಹಿಕ ಅಂತರವಿರಲಿ ಆದರೆ ಮಾನಸಿಕ ಅಂತರವನ್ನು  ದೂರ ಮಾಡದಿರಿ ಎಂದರು. ಅತಿಥಿಯಾಗಿದ್ದ ಅಬ್ದುಲ್ ಅಜೀಜ್ ಧಾರಮಿ ಮಾತನಾಡಿ,ಹೃದಯದ ಅಂತರಾಳದಿಂದ ಶಾಸಕರ ಮಾತು ಬಂದಿದ್ದು ಅವರೊಬ್ಬ ಸಮಾಜವನ್ನು ಒಂದಾಗಿಸುವ,ಅಭಿವೃಧ್ದಿಗೆ ಶ್ರಮಿಸುವ ಸಂತರಾಗಿದ್ದಾರೆ ಎಂದರು.15-43-17-IMG-20200816-WA0037-768x432

ಕೇಂದ್ರ ಜುಮ್ಮಾ ಮಸೀದಿಯ ಖತೀಬರಾದ ಅಬ್ಬುಸಲಾಂ ಯಾಮಾನಿ ಅವರು ದುವಾ ನೆರವೇರಿಸಿದರು.ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಫಾರೂಕ್,ಫೌಂಡೇಶನ್ ನ ಅಧ್ಯಕ್ಷ ಹಂಝಗುತ್ತು,ಉದ್ಯಮಿ ನಜೀರ್ ಆಹ್ಮದ್,ಗೌರವ ಸಲಹೆಗಾರ ಅಶ್ರಫ್,ನಂಡೆ ಫಲಾಲ್ ಅಧ್ಯಕ್ಷ ನೌಶಾದ್ ,ಮುತ್ತೂರು ಪ.ಪೂ.ಕಾಲೇಜಿನ ಉಪನ್ಯಾಸಕ ನಿರಂಜನ್,ಮೌಲನಾ ಅಜಾದ್ ಶಾಲೆಯ ಮುಖ್ಯೋಪಾಧ್ಯಾಯ ಮಹಮ್ಮದ್ ಹನೀಫ್,ಉದ್ಯಮಿ ಮುಸ್ತಾಫ್ ಟ್ರಸ್ಟಿಗಳಾದ ಎಂ.ಎಸ್.ಶಾಲಿ,ಎಂ.ಬಿ.ಶಾಫಿ,ಅಬ್ದುಲ್ ರಹಿಮಾನ್,ಸ್ಥಳೀಯ ಪ್ರಮುಖ ನಂದರಾಮ ರೈ ಉಪಸ್ಥಿತರಿದ್ದರು.

ಇದೇ ವೇಳೆ ಪ್ರಸ್ತುತ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸ್ಥಳೀಯ ವಿದ್ಯಾರ್ಥಿಗಳಾದ ಜೀವತಾ  ಭವಿಷ್ ಕುಮಾರ್ ರನ್ನು ಹಾಗೂ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರನ್ನು ಪೌಂಡೇಶನ್ ವತಿಯಿಂದ  ಸನ್ಮಾನಿಸಲಾಯಿತು.ಹಾಗೆಯೇ ಪ್ರಾಕೃತಿಕ ವಿಕೋಪದ ಸಿಎಂ ಫಂಡ್ ಗೆ ಪೌಂಡೇಶ್ ನ ವತಿಯಿಂದ 20 ಸಾ.ರೂ.ವಿನ ಚೆಕ್ ನ ಶಾಸಕರಲ್ಲಿ ವಿತರಿಸಲಾಯಿತು.ಸಾಮಾಜಿಕ ಕಾರ್ಯಕರ್ತ ರಫೀಕ್ ಮಾಸ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಸದಸ್ಯ ಸಜೀವುದ್ದೀನ್ ಸ್ವಾಗತಿಸಿ,ವಕೀಲ ಅನ್ಸಾರ್ ವಂದಿಸಿದರು.

By suddi9

Leave a Reply

Your email address will not be published. Required fields are marked *