ಬಂಟ್ವಾಳ: ಪಾಣೆಮಂಗಳೂರು ಬೈಪಾಸ್ ಬಳಿರುವ ವಾಣಿಜ್ಯಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿದ್ದ ವಿಷ್ಣು ಎಂಬಹೆಸರಿನ ಅಂಗಡಿ ಬೆಂಕಿಗಾಹುತಿಯಾಗಿದೆ.ರಾಜೇಶ್ ಎಂಬವರೊಗೆ ಸೇರಿದ ಅಂಗಡಿ ಇದಾಗಿದ್ದು,ಗುರುವಾರ ರಾತ್ರಿ ಅಂಗಡಿ ಮುಚ್ಚಿ ಮನೆಗೆ ತೆರಳಿದ್ದು,ಮಧ್ಯರಾತ್ರಿ ಹೊತ್ತಿಗೆ ಅಂಗಡೊಯೊಳಗಿನಿಂದ ದಟ್ಟ ಹೊಗೆ ಕಾಣಿಸಿಕೊಂಡು ವಾಸನೆ ಬರುತ್ತಿದ್ದದನ್ನು ಗಮನಿಸಿದ ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಬಂದಾಗ ಬೆಂಕಿಯ ಕೆನ್ನಾಲಗೆಗೆ ಅಂಗಡಿಯೊಳಗೆ ಸೊತ್ತುಗಳು ಸಂಪೂರ್ಣ ಕರಟಿ ಹೋಗಿತ್ತು ಎಂದು ತಿಳಿದುಬಂದಿದೆ.

13-09-00-IMG-20200814-WA0003-579x1024ವಿದ್ಯುತ್ ಶಾಟ್೯ ಸರ್ಕ್ಯೂಟ್ ನಿಂದ ಈ ಬೆಂಕಿಅವಘಢ ಸಂಭವಿಸಿದ್ದು,ಸುಮಾರು 10 ಲಕ್ಷ ರೂ.ವಿನಷ್ಟು ನಷ್ಟ ಉಂಟಾಗಿದೆ ಎಂದು ಅಂಗಡಿ ಮಾಲಕ ರಾಜೇಶ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

By suddi9

Leave a Reply

Your email address will not be published. Required fields are marked *