ಬಂಟ್ವಾಳ: ಬೆಂಗಳೂರಿನ ಕೆ.ಜಿ.ಹಳ್ಳಿ,ಡಿ.ಜಿ.ಹಳ್ಳಿಯಲ್ಲಿ ನಡೆದ ಗಲಭೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಗುರುವಾರ ಬಿ.ಸಿ.ರೋಡಿನ  ಮೇಲ್ಸ್ ತುವೆಯ ಅಡಿಯಲ್ಲಿ ಪ್ರತಿಭಟನೆ ನಡೆಯಿತು.16-52-06-IMG-20200813-WA0023-768x347 (1)
ಈ ಹಿಂಸಾಚಾರದಿಂದಾಗಿ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಅಪಾರ ಹಾನಿಯಾಗಿ ನಷ್ಟವುಂಟಾಗಿದ್ದು, ಅಮಾಯಕರು ತೊಂದರೆಅನುಭವಿಸುವಂತಾಗಿದೆ.ಹಾಗೆಯೇ ಪೊಲೀಸ್ ಠಾಣೆಗೂ ಮುತ್ತಿಗೆ ಹಾಕಿ ಧ್ವಂಸಕ್ಕು ಯತ್ನಿಸಲಾಗಿದೆ.ಈ ಕೃತ್ಯದಲ್ಲಿ ಶಾಮೀಲಾಗಿರುವ ಎಸ್ ಡಿ ಪಿ ಐ ಹಾಗೂ ಪಿಎಫ್ ಐ ಸಂಘಟನೆಯನ್ನು ನಿಷೇಧಿಸುವಂತೆ ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಆಗ್ರಹಿಸಿದರು. ಆದೇರೀತಿ ಈ ಕೃತ್ಯದ ಪ್ರಮುಖ ರೂವಾರಿ ಕಾರ್ಪೊರೇಟರ್ ಮುಜಾಯಿಲ್ ಪಾಶಾ ಸಹಿತ ಭಾಗಿಯಾಗಿರುವವರೆಲ್ಲರನ್ನು ಪತ್ತೆಹಚ್ಚಿ ಸೂಕ್ತಕಾನೂನು ಕ್ರಮ ಕೈಗೊಂಡು ಗರಿಷ್ಠ ಪ್ರಮಾಣದ ಶಿಕ್ಷೆ ವಿಧಿಸುವಂತಾಗಬೇಕು,ಭವಿಷ್ಯದಲ್ಲಿ ಈ ರೀತಿಯ ಕೃತ್ಯ ಮರುಕಳಿಸದಂತೆ ಸರಕಾರ ಎಚ್ಚರಿಕೆ ವಹಿಸಬೇಕು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಬಳಿಕ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.ವಿ.ಹಿಂ.ಪ.ನ ಜಿಲ್ಲಾ ಪ್ರಮುಖ್ ಸರಪಾಡಿ ಆಶೋಕ್ ಶೆಟ್ಟಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿ.ಹಿಂ.ಪ ಮತ್ರು ಬಜರಂಗದಳದ ಪ್ರಮುಖರಾದ ಭರತ್ ಕುಮ್ಡೇಲು,ಗುರುರಾಜ್ ಬಂಟ್ವಾಳ,ಶಿವಪ್ರಸಾದ್ ತುಂಬೆ,ಸುರೇಶ್ ಬೆಂಜನಪದವು,ಭುವಿತ್ ಶೆಟ್ಟಿ,ದೀಪಕ್ ಬಂಟ್ವಾಳ,ಪ್ರಸಾದ್ ಬೆಂಜನಪದವು,ಅಶ್ವಥ್ ಪುಂಜಾಲಕಟ್ಟೆ ಸಹಿತ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು

By Suddi9

Leave a Reply

Your email address will not be published. Required fields are marked *