ಬಂಟ್ವಾಳ: ಕಾಲ ಬೆರಳಲ್ಲೇ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದು ಉತ್ತಮ ಅಂಕ ಗಳಿಸಿದ ಕಂಚಿಗಾರಪೇಟೆ ರಾಜೇಶ್ ಆಚಾರ್ಯ ಮತ್ತು ಜಲಜಾಕ್ಷಿ ದಂಪತಿ ಪುತ್ರ ಕೌಶಿಕ್ ಅವರನ್ನು ರೋಟರಿ ಟೌನ್ ವತಿಯಿಂದ ಅವರ ಮನೆಗೆ ತೆರಳಿ ಅಧ್ಯಕ್ಷ ಪದ್ಮನಾಭ ರೈ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಮುಂದಿನ ಶಿಕ್ಷಣಕ್ಕೆ ಅನುಕೂಲವಾಗುವಂತೆ ಧನಸಹಾಯವನ್ನೂ ಈ ವೇಳೆ ನೀಡಲಾಯಿತು. ಈ ವೇಳೆ ನಿಯೋಜಿತ ರೋಟರಿ ಗವರ್ನರ್ ಪ್ರಕಾಶ್ ಕಾರಂತ್ ಮಾತನಾಡಿ ಕೌಶಿಕ್ ನನ್ನು ಅಭಿನಂದಿಸಿದರು.
ಅಧ್ಯಕ್ಷ ಪದ್ಮನಾಭ ರೈ ಮಾತನಾಡಿ ಮುಂದಿನ ದಿನಗಳಲ್ಲಿಯೂ ಕೌಶಿಕ್ ಶಿಕ್ಷಣಕ್ಕೆ ಕ್ಲಬ್ಬಿನ ವತಿಯಿಂದ ನೆರವನ್ನು ನೀಡುವುದಾಗಿ ಪ್ರಕಟಿಸಿದರು. ಈ ವೇಳೆ ರೋಟರಿ ಝೋನಲ್ ಲೆಫ್ಟಿನೆಂಟ್ ಜಯರಾಜ್ ಎಸ್. ಬಂಗೇರ, ಮಾತೃ ಕ್ಲಬ್ಬಿನ ಅಧ್ಯಕ್ಷ ನಾರಾಯಣ ಹೆಗ್ಡೆ, ಸುಜಾತಾ ಪಿ. ರೈ ಉಪಸ್ಥಿತರಿದ್ದರು. ಟೌನ್ ಕಾರ್ಯದರ್ಶಿ ಕಿಶೋರ್ ವಂದಿಸಿದರು.
