ಕೈಕಂಬ: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕುಪ್ಪೆಪದವು ಪಂಚಾಯತ್ ವ್ಯಾಪ್ತಿಯ ಕಿಲೆಂಜಾರು ಗ್ರಾಮದ ಅಂಬೆಲೊಟ್ಟು ಎಂಬಲ್ಲಿ ಗುಡ್ಡ ಕುಸಿದು ಅರುಣ್ ಕುಮಾರ್ ಮತ್ತು ಅನಿಲ್ ಕುಮಾರ್ ಎಂಬವರ ತೋಟಕ್ಕೆ ಬಿದ್ದ ಕಾರಣದಿಂದ ಅಡಿಕೆ ಮತ್ತು ತೆಂಗಿನ ತೋಟಕ್ಕೆ ಹಾನಿಯಾಗಿದ್ದು ಅಂದಾಜು ಐದು ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.
20200810_174604
ಭಾರೀ ಮಳೆಗೆ ಗುಡ್ಡದ ಅರ್ಧ ಭಾಗ ಅಡಿಕೆ ತೋಟದತ್ತ ಕುಸಿದ ಪರಿಣಾಮ ತೋಡಿನ ನೀರಿನ ಹರಿವಿಗೆ ತಡೆಯುಂಟಾಗಿ ತೋಡಿನ ನೀರು ಮತ್ತು ಗುಡ್ಡದ ಮಣ್ಣು ಅಡಿಕೆ ತೋಟಕ್ಕೆ ನುಗ್ಗಿದ್ದು ಸಾಧಾರಣ ನಾಲ್ಕು ಎಕರೆ ಪ್ರದೇಶದ ಫಸಲು ಕೊಡುವ ಅಂದಾಜು ನಾಲ್ಕುನೂರು ಅಡಿಕೆ ಮರಗಳು, ಅಡಿಕೆ ಸಸಿಗಳು ಮತ್ತು ಸುಮಾರು ನಲ್ವತ್ತಕ್ಕೂ ಹೆಚ್ಚು ತೆಂಗಿನ ಮರಗಳಿಗೆ ಹಾನಿಯಾಗಿದೆ ಇದರಿಂದಾಗಿ, ಸುಮಾರು ಐದು ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ.ಅಲ್ಲದೆ ಕುಡಿಯುವ ನೀರಿನ ಬಾವಿ ಮಣ್ಣಿನಿಂದ ಸಂಪೂರ್ಣ ಮುಚ್ಚಿ ಹೋಗಿದೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಲಾದ ಪ್ರವೀಣ್ ಮತ್ತು ಮಹೇಶ್, ಗ್ರಾಮಕರಣಿಕ ದೇವರಾಜ್, ಗ್ರಾಮ ಸಹಾಯಕಿ ರಜನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

By Suddi9

Leave a Reply

Your email address will not be published. Required fields are marked *