ಬಂಟ್ವಾಳ:ಕೊರೋನಾ ಮಹಾಮಾರಿ ಯಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಅರ್ಚಕರು ಮತ್ತು ಸಹಾಯಕರಿಗೆ ಧಾರ್ಮಿಕದತ್ತಿ ಇಲಾಖೆಯಿಂದ ಸಹಾಯಧನ ಒದಗಿಸುವಂತೆ ಆಗ್ರಹಿಸಿ ಸಜೀಪ ಮಾಗಣೆ ತಂತ್ರಿಯವರಾದ ಸುಬ್ರಹ್ಮಣ್ಯ ಭಟ್ ಅವರು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಯವರ ಮೂಲಕ ಧಾರ್ಮಿಕ ದತ್ತಿ ಇಲಾಖಾ ಸಚಿವರಿಗೆ ಮನವಿ ಮಾಡಿದ್ದಾರೆ.

IMG-20200811-WA0128 ಕೊರೋನ ಮಹಾಮಾರಿಯಿಂದ  ದೇವಸ್ಥಾನ, ದೈವಸ್ಥಾನ ಭಜನಾಮಂದಿರ ,ಗರೋಡಿ ಮೊದಲಾದ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಅರ್ಚಕರು, ಪ್ರಬಂಧಕರು, ಸಹಾಯ ಕಾರ್ಯಕರಾಗಿ ಮತ್ತು ಸ್ವಚ್ಛತಾ ಗಾರರು ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರ ಆಗಮನವಿಲ್ಲದೆ ಸರಕಾರದ ಆದೇಶದಂತೆ ಸೇವೆಗಳು ಜರಗದೇ ಇರುವುದರಿಂದ ತೀವ್ರ ಆರ್ಥಿಕ ಸಂಕಷ್ಟಗಳ ದಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಈನಿಟ್ಟಿನಲ್ಲಿ   ಧಾರ್ಮಿಕ ದತ್ತಿ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ  ಗಮನಕ್ಕೆ ಈ ವಿಚಾರವನ್ನು ತಂದು ಸಹಾಯಧನವನ್ನು ಒದಗಿಸುವಂತೆ  ಸುಬ್ರಹ್ಮಣ್ಯ ಭಟ್ ಅವರು ಲಿಖಿತ ಮನವಿಯಲ್ಲಿ ವಿನಂತಿಸಿದ್ದಾರೆ.

By suddi9

Leave a Reply

Your email address will not be published. Required fields are marked *