ಬಂಟ್ವಾಳ: ಭಾರತದ ಪ್ರಧಾನಿ ನರೇಂದ್ರ ಮೋದಿಜೀಯವರ ಆಶಯದಂತೆ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಪ್ರತಿ ಬೂತ್ ಮಟ್ಟದಲ್ಲಿ ಸಸಿ ನೆಟ್ಟು ಪರಿಸರ ಸಂರಕ್ಷಣೆಯೊಂದಿಗೆ ನಾಡಿನ ಸುರಕ್ಷತೆಯ ಕಡೆಗೆ ಬಿ.ಜೆ.ಪಿ.ಸಾಗುತ್ತಿದೆ .

ಎಂದು ಬಿಜೆಪಿಯ ಸಂಗಬೆಟ್ಟು ಮಹಾಶಕ್ತಿ ಕೇಂದ್ರ ಅದ್ಯಕ್ಷ ಸೀತಾರಾಮ ಪೂಜಾರಿ ಅಭಿಪ್ರಾಯ ಪಟ್ಟರು.ರಾಷ್ಟ್ರೀಯ ಬಿ.ಜೆ.ಪಿ.ಅದ್ಯಕ್ಷರಾದ ಜೆ.ಪಿ.ನಡ್ದಾರವರ ನಿರ್ದೇಶನ, ರಾಜ್ಯ ಬಿ.ಜೆ.ಪಿ.ಅದ್ಯಕ್ಷ ನಳಿನ್ ಕುಮಾರ್ ಕಟೀಲ್ ರವರ ಸೂಚನೆಯಂತೆ ಬಂಟ್ವಾಳ ಕ್ಷೇತ್ರ ಬಿ.ಜೆ.ಪಿ.ಅದ್ಯಕ್ಷ ದೇವಪ್ಪ ಪೂಜಾರಿ ನೇತೃತ್ವದಲ್ಲಿ ಶಾಸಕ ರಾಜೇಶ್ ನಾಯ್ಕ್,ಉಳಿಪಾಡಿಯವರ ಮಾರ್ಗದರ್ಶನದಲ್ಲಿ ಶನಿವಾರ ಸಂಗಬೆಟ್ಟು ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಬೂತ್ ಸಂಖ್ಯೆ 1 ಮತ್ತು 2 ರ ಕರ್ಪೆ ಗ್ರಾಮದಲ್ಲಿ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತಾನಾಡಿದರು. ಸ್ಥಳೀಯ ತಾಲೂಕು ಪಂಚಾಯತ್ ಸದಸ್ಯ, ಸಂಗಬೆಟ್ಟು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಪ್ರಭು ಹಾಗೂ ಬೂತ್ ಸಮಿತಿ 2 ರ ಅದ್ಯಕ್ಷ ನವೀನ ಪೂಜಾರಿ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬೂತ್ ಕಾರ್ಯದರ್ಶಿ ಗಳಾದ ಹರೀಶ್ ಪೂಜಾರಿ ಪಾದೆ,ಹರೀ ಪೂಜಾರಿ ಶೆಟ್ಟಿಬೆಟ್ಟು,ಉಮೇಶ್ ಗೌಡ ಮಂಚಕಲ್ಲು,ಮತ್ತಿತರ ಬಿ.ಜೆ.ಪಿ.ಕಾರ್ಯಕರ್ತರು ಭಾಗವಹಿಸಿದ್ದರು.
