ಬಂಟ್ವಾಳ: ಇಲ್ಲಿನ ಜೇಸಿಐ ಬಂಟ್ವಾಳ ವಲಯದ ಮಧ್ಯಂತರ ಸಮ್ಮೇಳನದಲ್ಲಿ ವಲಯದ ಅತ್ಯುತ್ತಮ ಘಟಕ ರನ್ನರ್ ಅವಾರ್ಡ್, ಎಕ್ಸಲೆಂಟ್ ಅವಾರ್ಡ್ ಹಾಗೂ ಸಿಲ್ವರ್ ಲೋಮ್ ಅವಾರ್ಡ್ ಗೆದ್ದುಕೊಂಡಿದೆ.
ಜೇಸಿಐ ಉಡುಪಿ ಸಿಲ್ವರ್ ಸ್ಟಾರ್ ಆತಿಥ್ಯದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಜೇಸಿಐ ವಲಯ 15 ರ ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಜೇಸಿಐ ಬಂಟ್ವಾಳದ ಅಧ್ಯಕ್ಷ ಸದಾನಂದ ಬಂಗೇರ ಅವರಿಗೆ ಪ್ರಶಸ್ತಿ ಹಸ್ತಾಂತರಿಸಿದರು.

