ಬಂಟ್ವಾಳ:  ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ  ತುಂಬೆ ಕಾಲೇಜಿಗೆ ೯೫% ಫಲಿತಾಂಶ ಸಾಧಿಸಲಾಗಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.೧೧೮ ವಿದ್ಯಾರ್ಥಿಗಳಲ್ಲಿ ೧೧೨ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.  ಕಲಾ ವಿಭಾಗದಲ್ಲಿ ೧೭ ವಿದ್ಯಾರ್ಥಿಗಳಲ್ಲಿ ೧೫ ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿ ೮೮% ಫಲಿತಾಂಶ ಬಂದಿದೆ.
ಅಫ್ರಾ ೫೧೦ ಅಂಕದೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ. ವಾಣಿಜ್ಯ ವಿಭಾಗದಲ್ಲಿ ೬೮ ವಿದ್ಯಾರ್ಥಿಗಳು ಹಾಜರಾಗಿದ್ದು, ೬೫ ವಿದ್ಯಾರ್ಥಿಗಳು ಉತ್ತೀರ್ಣರಾಗಿ ೯೫% ಫಲಿತಾಂಶ ಬಂದಿದೆ. ಫಾತಿಮ ನಿಶಾ ೫೫೪ ಅಂಕದೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ. ವಿಜ್ಞಾನ ವಿಭಾಗದಲ್ಲಿ ೩೫ ವಿದ್ಯಾರ್ಥಿಗಳು ಹಾಜರಾಗಿದ್ದು, ೩೪ ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿ ೯೭% ಫಲಿತಾಂಶ ಪಡೆದಿದ್ದು, ಹೀನಾ ೫೪೬ ಅಂಕದೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ.
ಕಾಲೇಜಿನ ಮೂರು ವಿಭಾಗದಲ್ಲಿ ೧೭ ಮಂದಿ ಡಿಸ್ಟಿಂಕ್ಷನ್, ೬೪ ವಿದ್ಯಾರ್ಥಿಗಳು ಪ್ರಥಮ ದರ್ಜೆ, ೨೫ ಮಂದಿ ದ್ವಿತೀಯ ದರ್ಜೆ ಹಾಗೂ  ೦೬ ಮಂದಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *