ಮಂಗಳೂರು: ಐಸಿಸ್ ಉಗ್ರರ ಹೆಸರಲ್ಲಿ ನಗರದ ಕುಲಶೇಖರದಿಂದ ಬಂದಿರುವ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪತ್ರದಲ್ಲಿದ್ದ ನಮೋದಿಸಲಾಗಿದ್ದ ಎರಡು ಕಟ್ಟಡಗಳಿಗೆ ಪೊಲೀಸ್ ರೈಡ್ ನಡೆದಿದೆ ಎಂದು ತಿಳಿದುಬಂದಿದೆ. ಮೇಲ್ನೋಟಕ್ಕೆ ಇದು ಕಿಡಿಗೇಡಿಗಳ ಕೃತ್ಯದಂತೆ ಕಂಡುಬರುತ್ತಿದೆ.

post office (1)

post office (2)

ಐಎಸ್ ಉಗ್ರಗಾಮಿ ಸಂಘಟನೆಯ ಹೆಸರಿನಲ್ಲಿ ಬೆದರಿಕೆ ಪತ್ರವೊಂದು ಸುದ್ದಿವಾಹಿನಿಗಳ ಕಚೇರಿಗೆ ಬಂದಿತ್ತು.

`ನಾವು ಐಎಸ್ ಐಎಸ್ ಉಗ್ರರಿಗೆ ಸಂಬಂಧಪಟ್ಟವರು., ಲೇಡಿಗೋಶನ್ ಸಮೀಪದ ಲಿಂಕಿಂಗ್ ಟವರ್ ಮತ್ತು ಜ್ಯೋತಿ ವೃತ್ತದ ಕೆಎಂಸಿ ಬಳಿಯ ಸ್ಮಾರ್ಟ್ ಟವರ್ ಕಟ್ಟಡಗಳಲ್ಲಿ ಮಟ್ಕಾ ದಂಧೆ ನಡೆಯುತ್ತಿದ್ದು, ಇದರಿಂದಾಗಿ ನಮ್ಮ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದಕ್ಕಾಗಿ ಈ ಎರಡು ಕಟ್ಟಡಗಳನ್ನು ನಾವು ಟಾರ್ಗೆಟ್ ಮಾಡಿದ್ದೇವೆ. ಈ ಎರಡು ಕಟ್ಟಡಗಳನ್ನು ನಾವು ಶೀಘ್ರದಲ್ಲೇ ಸ್ಪೋಟಿಸಲಿದ್ದೇವೆ’ ಎಂದು ಪತ್ರ ಟಿವಿ ವಾಹಿನಿಯೊಂದಕ್ಕೆ ಬಂದಿತ್ತು.

By suddi9

Leave a Reply

Your email address will not be published. Required fields are marked *