ಕೈಕಂಬ: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಮ ಎಂಬಲ್ಲಿ ವಿಕಲ ಚೇತನರಾದ ವೆಂಕಪ್ಪ ಪೂಜಾರಿಯವರಿಗೆ ತಾಲ್ಲೂಕು ಪಂಚಾಯತ್ ಸದಸ್ಯರ ಅನುದಾನದಿಂದ ಸುಮಾರು 30000 ವೆಚ್ಚದ ಮೂವಿಂಗ್ ಬೆಡ್ ಅನ್ನು ಶಾಸಕರಾದ ಭರತ್ ಶೆಟ್ಟಿ ವೈ ಅವರು ಶನಿವಾರ ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ತಾಲೂಕ್ ಪಂಚಾಯತ್ ಸದಸ್ಯರಾದ ವಿಶ್ವನಾಥ್ ಶೆಟ್ಟಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿರಣ್ ಕೋಡಿಕಲ್, ಮಹಾ ಶಕ್ತಿ ಕೇಂದ್ರದ ಸೋಹನ್ ಅತಿಕಾರಿ, ಮಂಡಲ ಉಪಾಧ್ಯಕ್ಸರಾದ ಅಮೃತ ಲಾಲ್ ಡಿ ಸೋಜಾ, ಶೋಧನ್ ಅದ್ಯಪಾಡಿ ಮಂಡಲ ಕಾರ್ಯದರ್ಶಿ, ಭೂತ್ ಅಧ್ಯಕ್ಸರಾದ ಹರೀಶ್ ನಡಿಕಳ, ಕಂದಾವರ ಶಕ್ತಿ ಕೇಂದ್ರದ ಪ್ರಮುಖರಾದ ಪ್ರವೀಣ್ ಶೆಟ್ಟಿ, ಕೊಳಂಬೆ ಶಕ್ತಿ ಕೇಂದ್ರ ಪ್ರಮುಖರಾದ ಸುಕೇಶ್ ಮನೈ, ಗ್ರಾಮ ಸಮೀತಿಯ ಅಧ್ಯಕ್ಸರಾದ ಸುಧಾಕರ್ ಕೊಳಂಬೆ, ಮಾಜಿ ತಾಲ್ಲೂಕ್ ಸದಸ್ಯರಾದ ಶಿವಪ್ಪ ಬಂಗೇರ,ಊರಿನ ಪ್ರಮುಖರಾದ ಶ್ರೀಧರ್ ಆಲ್ವಾ, ಸುರೇಂದ್ರ ಶೇಣವ, ಮಹಿಳಾ ಮೋರ್ಚಾದ ಕಾರ್ಯಕರ್ತರು ಹಾಗೂ ಬಿಜೆಪಿಯ ಕಾರ್ಯಕರ್ತರು ಉಪಸ್ಥಿತರಿದ್ದರು.
