ಬಂಟ್ವಾಳ: ಗ್ರಾಮಪಂಚಾಯತ್ ನ ಆಡಳಿತ ಅವಧಿ ಮುಕ್ತಾಯಗೊಂಡಿರುವ ಹಿನ್ನಲೆಯಲ್ಲಿ ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕಮಾಡಲಾಗಿದೆ. ಬಂಟ್ವಾಳ ತಾಲೂಕಿನ 57 ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿಯವರು ಆದೇಶಿಸಿದ್ದು, ಸೋಮವಾರದಿಂದ(ಜೂ.೨೯) ಗ್ರಾಪಂನಲ್ಲಿ ಆಡಳಿತಾಧಿಕಾರಿಗಳ ದರ್ಬಾರ್ ಶುರುವಾಗಲಿದ್ದು,ಒರ್ವ ಅಧಿಕಾರಿಗೆ 2 ರಿಂದ4 ಗ್ರಾಪಂಗಳ ಜವಬ್ದಾರಿಯನ್ನು ವಹಿಸಲಾಗಿದೆ.

IMG-20200627-WA0035ಸಂಗಬೆಟ್ಟು,ಕುಕ್ಕಿಪ್ಪಾಡಿ,ಚೆನ್ನೈತ್ತೋಡಿ ಗ್ರಾಪಂಗೆ ತೋಟಗಾರಿಕೆ ಹಿ.ಸ.ನಿರ್ದೇಶಕ ಪ್ರದೀಪ್ ಡಿಸೋಜ,ಪಿಲಾತಬೆಟ್ಟು,ಇರ್ವತ್ತೂರು, ಕಾವಳಪಡೂರು ಗ್ರಾಪಂಗೆ ಮೆಸ್ಕಾಂ ಎಇಇ ನಾರಾಯಣ ಭಟ್ಕಾವಳಮೂಡೂರು,ಉಳಿ,ಬಡಗಕಜೆಕಾರ ಗ್ರಾಪಂಗೆ ಮೆಸ್ಕಾಂ ಎಇಇ ಪ್ರಶಾಂತ್ ಪೈ,ಸರಪಾಡಿ,ನಾವೂರು,ಮಣಿನಾಲ್ಕೂರು ಗ್ರಾಪಂಗೆ ಭೂಮಾಪನ ಇಲಾಖೆಯ ಸ.ನಿರ್ದೇಶಕ ಪುಪ್ಪರಾಜ್ ಪೂಜಾರಿ,ಪಂಜಿಕಲ್ಲು,ಅಮ್ಟಾಡಿ,ರಾಯಿ ಗ್ರಾಪಂಗೆ ಸಹಾಯಕ ತೋಟಗಾರಿಕಾ ಅಧಿಕಾರಿ ದಿನೇಶ್,ಅರಳ,ಬಡಗಬೆಳ್ಳೂರು,ಕರಿಯಂಗಳಗ್ರಾಪಂಗೆ ಪಂ.ರಾಜ್ ಎಂಜಿನಿಯರಿಂಗ್ ವಿಭಾಗದ ಎಇಇ ತಾರನಾಥ್ ಸಾಲಿಯಾನ್ ,ಅಮ್ಮುಂಜೆ,ಮೇರಮಜಲು, ತುಂಬೆಗ್ರಾಪಂಗೆ ಪಿಡಬ್ಲ್ಯಡಿ ಸ.ಇಂ.ಅಮೃತಕುಮಾರ್, ಕಳ್ಳಿಗೆ,ನರಿಕೊಂಬು,ಬಾಳ್ತಿಲ ಗ್ರಾಪಂಗೆ ಸ.ಕೃಷಿ ಅಧಿಕಾರಿ ನಾರಾಯಣ ಶೆಟ್ಟಿ,ಕಡೇಶ್ವಾಲ್ಯ, ಬರಿಮಾರು,ಗೋಳ್ತಮಜಲು ಗ್ರಾಪಂಗೆ ಸಿಡಿಪಿಒ ಗಾಯತ್ರಿ ಆರ್.ಕಂಬಳಿ, ಸಜೀಪಮುನ್ನೂರು, ಸಜೀಪಮೂಡ, ಸಜೀಪನಡುಗ್ರಾಪಂಗೆಪಿಡಬ್ಲ್ಯಡಿ ಸ.ಎಂಜಿನಿಯರ್ ಷಣ್ಮಗಂ,ಕುರ್ನಾಡು, ಸಜೀಪಪಡು,ಪಜೀರುಗ್ರಾಪಂಗೆ ಪಿಡಬ್ಲ್ಯಡಿ ಎಂಜಿನಿಯರ್ ರವೀಂದ್ರನಾಥ ಶೆಟ್ಟಿ, ಬಾಳೆಪುಣಿ,ನರಿಂಗಾನ ಗ್ರಾಪಂಗೆ ಅಕ್ಷರದಾಸೋಹ ನಿರ್ದೇಶಕ ನೋಣಯ್ಯ,ಮಂಚಿ,ಇರಾ ಗ್ರಾಪಂಗೆ ಜಾನುವಾರ ಅಭಿವೃದ್ಧಿ ಅಧಿಕಾರಿಕೃಷ್ಣಮೂರ್ತಿ ಜೆ.,ವೀರಕಂಬ,ಬೋಳಂತೂರುಗ್ರಾಪಂ ಪಿಡಬ್ಲ್ಯಡಿ ಸ.ಎಂಜಿನಿಯರ್ ಪ್ರೀತಂ ಎಂ., ಮಾಣಿ,ಪೆರಾಜೆ,ನೆಟ್ಲಮುಡ್ನೂರು ಗ್ರಾಪಂಗೆ ಕೃಷಿ ಅಧಿಕಾರಿ ನಂದನ್ ಶೆಣ್ಯೆ,ಅನಂತಾಡಿ,ಕೆದಿಲ,ಪೆರ್ನೆ ಗ್ರಾಪಂಗೆ ಮೆಸ್ಕಾಂ ಸ.ಇಂಜಿನಿಯರ್ ಪ್ರವೀಣ್ ಜೋಶಿ, ಇಡ್ಕಿದು,ವಿಟ್ಲಮುಡ್ನೂರು,ಕೊಳ್ನಾಡುಗ್ರಾಪಂಗೆಪಂ.ರಾಜ್.ಸ.ಇಂ.ಕುಶಕುಮಾರ್,ಕರೋಪಾಡಿ,ಸಾಲೆತ್ತೂರು,ಕನ್ಯಾನಗ್ರಾಪಂಗೆ ಬಿಇಒ ಜ್ಙಾನೇಶ್, ಮಾಣಿಲ,ಪೆರುವಾಯಿ,ಅಳಿಕೆ ಗ್ರಾಪಂಗೆತಾಪಂಇಒ ರಾಜಣ್ಣ,ಕೇಪು,ಪುಣಚಗ್ರಾಪಂಗೆ ಸಿಡಿಪಿಒ ಸುಧಾಜೋಶಿ ಅವರನ್ನು ಆಡಳಿತಾಧಿಕಾರಿಯವರನ್ನಾಗಿ  ನೇಮಕಗೊಳಿಸಿ ಆದೇಶಿಸಲಾಗಿದೆ.

By suddi9

Leave a Reply

Your email address will not be published. Required fields are marked *