ಬಂಟ್ವಾಳ: ಬಂಟ್ವಾಳ ತಾ. ಪಿಲಾತಬೆಟ್ಟು ಗ್ರಾ.ಪಂ. ನಲ್ಲಿ ಸುಮಾರು 25ವರ್ಷಗಳ ಅವ„ ಬಿಲ್ಲು ವಸೂಲಿಗರಾಗಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾ. ಪಂ. ಗೆ ಕಾರ್ಯದರ್ಶಿ ಗ್ರೇಡ್-2 ಹುದ್ದೆಗೆ ಭಡ್ತಿ ಹೊಂದಿದ ಆನಂದ ಅವರಿಗೆ ಪಿಲಾತಬೆಟ್ಟು ಗ್ರಾ.ಪಂ. ಹಾಗೂ ಗ್ರಾಮಸ್ಥರ ವತಿಯಿಂದ ಬೀಳ್ಕೊಡುಗೆ ಮತ್ತು ಸಮ್ಮಾನ ಕಾರ್ಯಕ್ರಮ ಗ್ರಾ.ಪಂ.ಕಚೇರಿಯಲ್ಲಿ ನಡೆಯಿತು.2606pkt1

ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಅವರು ಮಾತನಾಡಿ, ಪ್ರಾಮಾಣಿಕ, ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ಗ್ರಾಮಸ್ಥರ ಗೌರವಾದರ ಗಳಿಸಿದ ಆನಂದ ಅವರ ಸೇವೆ ಅನನ್ಯವಾದುದು. ಅವರಿಗೆ ಶುಭವಾಗಲಿ ಎಂದು ಶುಭ ಹಾರೈಸಿದರು. ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಮತ್ತಿತರರು ಶುಭ ಹಾರೈಸಿದರು.

ಗ್ರಾ.ಪಂ. ಉಪಾಧ್ಯಕ್ಷೆ ಲಕ್ಷ್ಮಿ ಜೆ.ಬಂಗೇರ, ಮಾಜಿ ಅಧ್ಯಕ್ಷೆ ಭಾರತಿ ಶೆಟ್ಟಿ, ಪಂ.ಅ.ಅ„ಕಾರಿ ರಾಜಶೇಖರ ರೈ, ಕಾರ್ಯದರ್ಶಿ ಜೋಯಲ್ ಪ್ರಶಾಂತ್ ಫೆಲೆರೊ,ಸದಸ್ಯರಾದ ಲಕ್ಷ್ಮೀ ನಾರಾಯಣ ಹೆಗ್ಡೆ, ಸರೋಜಾ ಶೆಟ್ಟಿ, ತು.ರ.ವೇ.ಬಂಟ್ವಾಳ ಅಧ್ಯಕ್ಷ ರಮೇಶ್ ಶೆಟ್ಟಿ ಮಜಲೋಡಿ, ಪಿಲಾತಬೆಟ್ಟು ಸಹಕಾರಿ ಸಂಘದ ನಿರ್ದೇಶಕ ಪಿ.ಎಂ.ಪ್ರಭಾಕರ,ಮೋಹನ ಸಾಲ್ಯಾನ್,ಹರೀಶ್ಚಂದ್ರ ಶೆಟ್ಟಿಗಾರ್, ಜಯರಾಜ ಅತ್ತಾಜೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬಂದಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *