ಬಂಟ್ವಾಳ : ಉಪ್ಪಡ್ ಪಚ್ಚಿಲ್ ಆರಂಭಿಸಿದವಳು ತಾಯಿ, ಆಕೆಯೇ ಮೊದಲ ವಿಜ್ಞಾನಿ.ಹಲಸಿನ ಹಣ್ಣಿನಲ್ಲಿ ಅಪಾರವಾದ ಪ್ರೊಟೀನ್ ಅಂಶಗಳಿದ್ದು,ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದ್ದಾರೆ.
ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ವೇದವ್ಯಾಸ ಮಂದಿರದಲ್ಲಿ ನಡೆದ “ಉಪ್ಪಡ್ ಪಚ್ಚಿಲ್ ಆಯನೋ” ಎಂಬ ತುಳುವ ಕಾರ್ಯಕ್ರಮವನ್ನು ಹಲಸಿನ ಕಾಯಿ ತುಂಡರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಆಹಾರ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದರು .ಶ್ರೀರಾಮ ವಿದ್ಯಾಕೇಂದ್ರದ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್, ಉಪಾಧ್ಯಕ್ಷ ನಾರಾಯಣ ಗೌಡ, ಆಡಳಿತ ಮಂಡಳಿ ಸದಸ್ಯರಾದ ಆರ್ ಚೆನ್ನಪ್ಪ ಕೊಟ್ಯಾನ್, ಲಕ್ಷ್ಮೀ ರಘುರಾಜ್,ಮಲ್ಲಿಕಾ ಶೆಟ್ಟಿ,ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಜಯರಾಮ, ಪದ್ಮನಾಭ ,ಶ್ರೀ ರಾಮ ವಿದ್ಯಾಕೇಂದ್ರದ ಕೋಶಧಿಕಾರಿ ಶಿವಗಿರಿ ಸತೀಶ್ ಭಟ್ ,ಹೊಯ್ಸಳ ರಾಷ್ಟ್ರ ಸೇವಿಕಾ ಸಮಿತಿಯ ಪ್ರಾಂತಕಾರ್ಯಕಾರಿಣಿ ಸದಸ್ಯೆ ಕಮಲಾ ಪ್ರಭಾಕರ ಭಟ್, ಮುಖ್ಯ ಶಿಕ್ಷಕ ರವಿರಾಜ್ ಕಣಂತೂರು ಮತ್ತು ಮಾತೃಭಾರತಿಯ ಪದಾಧಿಕಾರಿಗಳಾದ ಸೌಮ್ಯ, ಬೇಬಿ, ರಾಜಶ್ರೀ ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು.


