ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಿ ಸಿ ಟ್ರಸ್ಟ್ ಆಶ್ರಯದಲ್ಲಿ ಪಾಣೆಮಂಗಳೂರು ವಲಯದ ಸಜಿಪ ಮೂಡ ಕಾರ್ಯಕ್ಷೇತ್ರದ ಶ್ರೀ ನಾರಾಯಣಗುರು ಮಂದಿರದಲ್ಲಿ ಪರಿಸರ ಜಾಗೃತಿ ಮತ್ತು ಸಸಿ ವಿತರಣಾ ಕಾರ್ಯಕ್ರಮ ನಡೆಯಿತು .ಕಾರ್ಯಕ್ರಮದ ಅದ್ಯಕ್ಷತೆಯನ್ನು ಒಕ್ಕೂಟದ ಅದ್ಯಕ್ಷ ಚಂದ್ರಹಾಸ ರವರು ವಹಿಸಿದ್ದರು.
ಯೋಜನೆಯ ಬಂಟ್ವಾಳ ತಾಲೂಕಿನ ಯೋಜನಾದಿಕಾರಿ ಜಯಾನಂದ್ ಪಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಯೋಜನೆಯ ಮೂಲಕ ಪ್ರತೀ ವರ್ಷ ತಾಲೂಕಿನಲ್ಲಿ 10 ಸಾವಿರ ಗಿಡಗಳನ್ನು ನಾಟಿ ಮಾಡಲಾಗುತ್ತಿದ್ದು, ಉಚಿತವಾಗಿ ಗಿಡಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಬಿ.ಸಿ. ರೋಡ್ ವಲಯದ ಜನಜಾಗೃತಿ ವಲಯಾದ್ಯಕ್ಷರಾದ ರೊನಾಲ್ಡ್ ಡಿಸೋಜರವರು ಪರಿಸರ ಸಂರಕ್ಷಣೆ ಹಾಗು ಪರಿಸರ ಮಾಲಿನ್ಯದ ಕುರಿತು ಮಾಹಿತಿ ನೀಡಿದರು. ಜ್ಞಾನ ವಿಕಾಸ ಸಮನ್ವಯಾದಿಕಾರಿ ಸ್ವಪ್ನ ಸ್ವಾಗತಿಸಿದರು.ಸೇವಾಪ್ರತಿನಿಧಿ ಕುಸುಮ ವಂದಿಸಿದರು. ಮೇಲ್ವಿಚಾರಕಿ ಅಮಿತಾ ನಿರೂಪಿಸಿದರು.
