ಕೈಕಂಬ: ಪ್ರಸ್ತುತ ವರ್ಷ ರಾಜ್ಯದಲ್ಲಿ “ಯಂತ್ರಶ್ರೀ”ಗೆ ಹೆಚ್ಚು ಒತ್ತು ನೀಡುತ್ತಿದ್ದು,ಹಡೀಲು ಭೂಮಿಯಲ್ಲಿ ಭತ್ತ ಬೆಳೆಯನ್ನು ಬೆಳೆಯಲು ಯಂತ್ರಶ್ರೀ ಮೂಲಕ ಕಡಿಮೆ ವೆಚ್ಚ,ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯವನ್ನು ತರಲಿದೆ ಎಂದು ಕರಾವಳಿ ಪ್ರಾದೇಶಿಕ ಕಚೇರಿ ನಿರ್ದೇಶಕರಾದ ವಸಂತ ಸಾಲಿಯಾನ್ ತಿಳಿಸಿದ್ದಾರೆ. ಶ್ರೀ.ಕೇ.ಧ.ಗ್ರಾ.ಯೋ.ಯ ಆಶ್ರಯದಲ್ಲಿ ಪೊಳಲಿ ಶ್ರೀನಿವಾಸ ಮಯ್ಯ ಅವರ ಗದ್ದೆಯಲ್ಲಿ ಭಾನುವಾರ ನಡೆದ ಯಾಂತ್ರೀಕೃತ ಭತ್ತದ ನಾಟಿ ಕುರಿತು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕರಾವಳಿ ಪ್ರಾದೇಶಿಕ ವ್ಯಾಪ್ತಿಯಲ್ಲಿ ಹತ್ತು ಸಾವಿರ ಎಕ್ರೆಯಲ್ಲಿ ಯಂತ್ರಶ್ರೀ ಮೂಲಕ ಕಾರ್ಯಕ್ರಮಕ್ಕೆ ಈಗಾಗಲೇ ಕಾರ್ಯಪ್ರವೃತವಾಗಿದೆ ಎಂದ ಅವರು ಟ್ರೇ,ಯಂತ್ರಗಳನ್ನು ಒದಗಿಸಲಾಗಿದ್ದು ರೈತರು ಬಿತ್ತನೆ ಕಾರ್ಯವನ್ನು ಕೂಡ ಆರಂಭಿಸಿದ್ದಾರೆ ಎಂದರು.ಬಂಟ್ವಾಳ ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾರಾಯಣ ಶೆಟ್ಟಿ ಇಲಾಖೆಯಿಂದ ರೈತರಿಗೆ ಸಿಗುವಂತಹ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.ತಾಪಂ ಸದಸ್ಯ ಯಶವಂತ ಪೊಳಲಿ ಸಭಾಧ್ಯಕ್ಷತೆ ವಹಿಸಿದ್ದರು.
ಶ್ರೀ.ಕ್ಷೇ.ಗ್ರಾ.ಯೋ.ಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ,ಸ್ಥಳೀಯ ಗ್ರಾಪಂ ಅಧ್ಯಕ್ಷೆ ಚಂದ್ರಾವತಿ,ಪೊಳಲಿ ಸೇ.ಸ.ಬ್ಯಾಂಕಿನ ನಿರ್ದೇಶಕ ಸಂಪತ್ ಕುಮಾರ್,ಮೆನೇಜರ್ ವಿಜಯಾ ಫೆರ್ನಾಂಡಿಸ್,ಒಕ್ಕೂಟದ ಅಧ್ಯಕ್ಷೆ ಪ್ರಮೀಳಾ,ಯೋಜನೆಯ ಬಂಟ್ವಾಳ ತಾ.ಘಟಕದ ಯೋಜನಾಧಿಕಾರಿ ಜಯಾನಂದ ಪಿ.ವೇದಿಕೆಯಲ್ಲಿದ್ದರು.ಸಿ.ಎಚ್ .ಎಸ್. ಸಿ.ಸಮನ್ವಯಾಧಿಕಾರಿ ಆಶೋಕ್,ವಿಭಾಗದ ಸೇವಾ ಪ್ರತಿನಿಧಿಗಳಾದ ಅಶ್ವಿನಿ,ರೇಖಾ ಉಪಸ್ಥಿತರಿದ್ದರು.
ಸುಮಾರು 35 ಮಂದಿ ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಇದರ ಪ್ರಯೋಜನ ಪಡೆದುಕೊಂಡರು.ತುಂಬೆ ವಲಯ ಮೇಲ್ವಿಚಾರಕಿ ಮಮತಾ ಸದವಾಗತಿಸಿದರು.ಸಿ.ಎಚ್. ಎಸ್. ಸಿ.ಯ ಪ್ತಬಂಧಕ ಸಂದೇಶ್ ವಂದಿಸಿದರುಕೃಷಿ ಮೇಲ್ವಿಚಾರಕ ಜನಾರ್ದನ ನೊರೂಪಿಸಿದರು.
