ಬಂಟ್ವಾಳ:  ನೂತನ ತುಂಬೆ ವೆಂಟೆಡ್ ಡ್ಯಾಂ ನಿಂದ ಮುಳುಗಡೆಯಾದ ಜಮೀನಿಗೆ, ಇನ್ನು ಕೆಲ ರೈತರಿಗೆ ನೆಲ ಬಾಡಿಗೆ ಅಥವಾ ಶಾಶ್ವತ ಭೂ ಪರಿಹಾರ ದೊರೆಯದಿರುವ ಕುರಿತಾಗಿ ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿಯ ನಿಯೋಗ ಜಿಲ್ಲಾ ಉಸ್ತುವಾರಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸೋಮವಾರ ಭೇಟಿಯಾಗಿ  ಮನವಿ ಅರ್ಪಿಸಿತು.IMG-20200615-WA0058

ಕಳೆದ ವಿಧಾನಸಭೆ ಅಧಿವೇಶನದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು  ಸಂತ್ರಸ್ತ ರೈತರಿಗೆ ವರತೆ ಪ್ರದೇಶಕ್ಕೂ ಭೂ ಪರಿಹಾರ ಭರಿಸಬೇಕು ಎಂದು ಸರಕಾರದ ಗಮನ ಸೆಳೆದಾಗ ಕಂದಾಯ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟಿದ್ದರು.

ಆದರೆ ಈತನಕ ಅದರ ಅನುಷ್ಠಾನ ಆಗದಿರುವುದರ  ಬಗ್ಗೆಯು ರೈತರ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆಯಿತು.ನಿಯೋಗದಲ್ಲಿ ತುಂಬೆ ಡ್ಯಾಂ ರೈತರ ಹೋರಾಟ ಸಮಿತಿ ಅಧ್ಯಕ್ಷ ಎo ಸುಬ್ರಹ್ಮಣ್ಯ ಭಟ್, ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯ ಶಂಕರ ಬಾಸ್ರಿತ್ತಾಯ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾಧಾಕೃಷ್ಣ ಆಳ್ವ ಮಾಜಿ ಗ್ರಾಮ ಪಂಚಾಯಿತ್  ಅಧ್ಯಕ್ಷ ಬಿ. ಶೋಭಿತ್ ಪೂಂಜಾ, ಬಿಜೆಪಿ ಮುಖಂಡ ಶ್ರೀಕಾಂತ್ ಶೆಟ್ಟಿ  ಉಪಸ್ಥಿತರಿದ್ದರು.ಈ ಸಂದರ್ಭ  ಮೂಡಬಿದರೆ ಶಾಸಕ ಉಮಾನಾಥ ಕೋಟ್ಯಾನ್  ಹಾಜರಿದ್ದರು ಶಾಸಕ ರಾಜೇಶ್ ನಾಯ್ಕ್ ಅವರ ಗಮನಕ್ಕೆ ತಂದು ರೈತರ ಸಮಸ್ಯೆ ಪರಿಹರಿಸುವುದಾಗಿ ಉಸ್ತುವಾರಿ ಸಚಿವರು ಭರವಸೆ ನೀಡಿದರು.

By suddi9

Leave a Reply

Your email address will not be published. Required fields are marked *