ಪೊಳಲಿ: ಕರಿಯಂಗಳ ಗ್ರಾಮ ಪಂಚಾಯತ್ ವ್ತಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಶನಿವಾರ ಚಾಲನೆ ನೀಡಿದರು. ಅಂದಾಜು 86 ಲಕ್ಷ ರೂಪಾಯಿ ವೆಚ್ಚದಲ್ಲಿ ಡಾಮರೀಕರಣಗೊಂಡಿರುವ ಪುಂಚಮೆ -ಪಲ್ಲಿಪ್ಪಾಡಿ ರಸ್ತೆ, ಪೊಳಲಿ ದ್ವಾರದ ಬಳಿ 1.25 ಲಕ್ಷ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾದ ಹೈಮಾಸ್ಟ್ ದೀಪ, 20 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಲ್ಕಟ್ಟ ನೂತನ ರಸ್ತೆಯನ್ನು ಶಾಸಕರು ಉದ್ಘಾಟಿಸಿದರು.13vpakileswara rasthe

13vp akileswara

13vp ka raste

13vp punchame rsthe udgatane

13vp himaskಹಾಗೂ 10 ಲಕ್ಷ ರೂಪಾಯಿ ವೆಚ್ಚದ ಪೊಳಲಿ ಅಖಿಲೇಶ್ವರ ದೇವಸ್ಥಾನ ರಸ್ತೆಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು ಶಾಸಕರು, ಮಯ್ಯರ ಕೂಟೇಲು ಬಳಿ ಫಲ್ಗುಣಿ ನದಿ ದಂಡೆ ಸಂರಕ್ಷಣಾ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಈ ಸದರ್ಭದಲ್ಲಿ ಶ್ರೀ ಅಖಿಲೇಶ್ವರ ದೇವಸ್ಥಾನದ ಮೊಕ್ತೇಸರ ಕೆ.ರಾಮ್ ಭಟ್‌ಪೊಳಲಿ, ಉದ್ಯಮಿ ಕ್ರಷಿಕರಾದ ಜೀವರಾಜ್ ಶೆಟ್ಟಿ ಅಮುಂಜೆ, ವೆಂಕಟೇಶ ನಾವಡ ಪೊಳಲಿ, ತಾ.ಪಂ ಸದಸ್ಯ ಯಶವಂತ ಪೂಜಾರಿ,ಕರಿಯಂಗಳ ಗ್ರಾ.ಪಂ.ಅದ್ಯಕ್ಷ ಚಂದ್ರವಾತಿ, ಗ್ರಾ.ಪಂ.ಸದಸ್ಯರಾದ ಲೋಕೇಶ್ ಭರಣಿ, ಕಿಶೋರ್ ಪಲ್ಲಿಪಾಡಿ,ಭೂನ್ಯಾಯ ಮಂಡಳಿ ಸದಸ್ಯ ಸುಕೇ‌ಶ್ ಚೌಟ ಬಡಕಬೈಲ್ ಹಾಗೂ ಕಾರ್ತಿಕ್ ಬಲ್ಲಾಲ್ ಗೋಪಾಲ್ ಬಂಗೇರಾ ಮತ್ತು ಪಕ್ಷದ ಕಾರ್ಯಕರ್ತರು ಇದ್ದರು.

By suddi9

Leave a Reply

Your email address will not be published. Required fields are marked *