ಬಂಟ್ವಾಳ:  ವಿಶ್ವ ಬಾಲಕಾಮಿ೯ಕ ಪದ್ದತಿ  ವಿರೋಧಿ ದಿನಾಚರಣೆಯ ಪ್ರಯುಕ್ತ  ಜನಜಾಗೃತಿ ರಥ  ಸಂಚಾರಕ್ಕೆ ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಮುಂಭಾಗ ಬಂಟ್ವಾಳ   ತಹಶೀಲ್ದಾರ್ ರಶ್ಮಿ ಎಸ್ ಆರ್  ಚಾಲನೆ ನೀಡಿದರು. ಅತಿಥಿಯಾಗಿದ್ದ   ಬಂಟ್ವಾಳ ಕಾಮಿ೯ಕ ನಿರೀಕ್ಷಕರ  ಮೆಲಿ೯ನ್ ಗ್ರೇಸಿ ಅವರು  ವಿಶ್ವ ಬಾಲಕಾಮಿ೯ಕ  ಪದ್ದತಿ ವಿರೋಧಿ  ದಿನದ ಸಮಯದಲ್ಲಿ  ಕೋವಿಡ್ -19 ನ ಈ ಹೊತ್ತಿನಲ್ಲಿ  ಮಕ್ಕಳನ್ನು ಬಾಲಕಾಮಿ೯ಕತೆಯಿಂದ ಮುಕ್ತ ವಾಗಿಸುವ ನಿಟ್ಟಿನಲ್ಲಿ ಹೆಚ್ಚು  ಜಾಗರೂಕತೆವಹಿಸಬೆರಕೆಂದರು.     IMG-20200612-WA0022

ಬಾಲ್ಯಾವಸ್ಥೆಯ ಮಕ್ಕಳನ್ನು  ಯಾವುದೇ  ಸಂಸ್ಥೆ ಗಳಲ್ಲಿ  ಹಾಗೂ 15ವಷ೯ದಿಂದ 18 ವಷ೯ದೊಳಗಿನ ಕಿಶೋರಾವ್ಯಸ್ಥೆಯ ಮಕ್ಕಳ ನ್ನು  ಅಪಾಯಕಾರಿ ಸಂಸ್ಥೆಗಳಲ್ಲಿ ದುಡಿಸಿಕೊಳ್ಳ ಬಾರದು, ದುಡಿಸಿಕೊಂಡಲ್ಲಿ ಸಾವ೯ಜನಿಕರು ಚೈಲ್ಡ್  ಲೈನ್  ಅಥವಾ  ಕಾಮಿ೯ಕ ಇಲಾಖೆಗೆ ಮಾಹಿತಿ  ನೀಡುವಂತೆ ತಿಳಿಸಿದರು.

ಗಾಯತ್ರಿ ಭಾಯ್ ಬಂಟ್ವಾಳ ಸಿ. ಡಿ. ಪಿ ಒ  ಗಾಯತ್ರಿ ಆರ್ ಕಂಬಳಿ  ಮಹಿಳಾ ಮತ್ತುಮಕ್ಕಳ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕರು, ಶಿಕ್ಷಣ ಇಲಾಖೆ, ಬಂಟ್ವಾಳ ನಗರ ಠಾಣೆಯ  ಎ .ಎಸ್. ಐ  ಜಯರಾಮ  ರೈ,  ಕಂದಾಯ ನಿರೀಕ್ಷಕರು, ಸಾಂತ್ವನ ಕೇಂದ್ರದ  ಆಪ್ತ ಸಮಾಲೋಚಕರು, ಮತ್ತು ತಾಲೂಕು ಕಛೇರಿಯ ಸಿಬ್ಬಂದಿಯವರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *