ಬಂಟ್ವಾಳ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಅವಧಿಯ ಮೊದಲನೇ ವರ್ಷ ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ಸ್ವತಹ ನರೇಂದ್ರ ಮೋದಿಜಿ ಅವರೇ ದೇಶದ ಜನತೆಗೆ ಬರೆದಂತಹ ಸಂದೇಶವನ್ನು ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ ರವರು ಬಂಟ್ವಾಳ ಪರಿಸರದಲ್ಲಿರುವ ಮನೆಗಳಿಗೆ ವೇಳೆ ವಿತರಿಸಿದರು.
ಪ್ರಧಾನಿ ನರೇಂದ್ರ ಮೋದಿಜಿ ಅವರು ಕಳೆದ ಒಂದು ವರ್ಷದಲ್ಲಿ ಮಾಡಿರುವ ಸಾಧನೆ ದಶಕಗಳಿಂದ ಉಳಿದಂತಹ ಜಟಿಲ ಸಮಸ್ಯೆಗಳನ್ನು ಕಾನೂನಿನ ಮುಖಾಂತರ ಅದಕ್ಕೆ ಪರಿಹಾರ, ತ್ರಿಬಲ್ ತಲಾಕ್, ಸಂವಿಧಾನದಲ್ಲಿ 370 ವಿಧಿ ರದ್ದತಿ, ಅಯೋಧ್ಯೆಯ ರಾಮಮಂದಿರದ ಪರಿಹಾರ ಹಾಗೆ ನಿರಾಶ್ರಿತರಿಗೆ ಆಶ್ರಯ ಕೊಡುವಂತಹ ಕಾನೂನಿಗೆ ತಿದ್ದುಪಡಿ ಹೀಗೆ ಹಲವು ಗಂಭೀರ ಸಮಸ್ಯೆಗಳನ್ನು ಪರಿಹರಿಸಿ ವಿಶ್ವದಲ್ಲಿ ದೇಶವನ್ನು ಗುರುತಿಸುವಂತೆ ಮಾಡಿದಂತಹ ನರೇಂದ್ರ ಮೋದಿಜಿ ಅವರ ಕಲ್ಪನೆ ಯೋಚನೆ ಯೋಜನೆಗಳನ್ನು ಈ ಸಂದರ್ಭದಲ್ಲಿ ಅವರು ಜನತೆಗೆ ತಿಳಿಸಿದರು.
