ಕೋಲಾರ: ಕೋರೋನಾ ವೈರಸ್ ನಿಯಂತ್ರಣಕ್ಕೆ ಬರುವವರೆಗೂ ಸಹಕಾರ ಬ್ಯಾಂಕ್‍ಗಳು ರೈತರಿಗೆ ನೋಟಿಸ್ ನೀಡುವ ಜೊತೆಗೆ ಬಲವಂತದ ಸಾಲ ಮಾಡದಂತೆ ಸೂಚನೆ ನೀಡುವ ಜೊತೆಗೆ ಮೇಗಾ ಡೈರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ರೈತ ಸಂಘದಿಂದ ಸಹಕಾರ ಸಚಿವರಾದ ಎಸ್.ಟಿ ಸೋಮಶೇಖರ್‍ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಮನವಿ ನೀಡಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ,ನಾರಾಯಣಗೌಡ ಇಡೀ ವಿಶ್ವವೇ ಕಣ್ಣಿಗೆ ಕಾಣದ ವೈರಸ್ ಹಾವಳಿಯಿಂದ ತತ್ತರಿಸುತ್ತಿದೆ. ಇದರಿಂದ ದೇಶದ ಆರ್ಥಿಕ ವ್ಯವಸ್ಥೆ ನೆಲ ಕಚ್ಚುವ ಜೊತೆಗೆ ಕೋಟ್ಯಾಂತರ ಕೃಷಿ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಬೀದಿಗೆ ಬೀಳುತ್ತಿರುವುದು ಒಂದುಕಡೆಯಾದರೆ ಮತ್ತೊಂದೆಡೆ ರೈತರು ಬೆಳೆದ ಬೆಳೆಗಳಾದ ಹೂ, ತರಕಾರಿ, ರೇಷ್ಮೇ, ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತವಾದ ಬೆಲೆಯಿಲ್ಲದೆ, ಹಾಕಿದ ಬಂಡವಾಳ ಕೈಸೇರದೆ ಖಾಸಗಿ ಸಾಲಕ್ಕೆ ಸಿಲುಕಿ ತೊಂದರೆಯಲ್ಲಿರುವ ರೈತರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಆರ್.ಬಿ.ಐ ಬ್ಯಾಂಕ್ ಅಧಿಕಾರಿಗಳು 3 ತಿಂಗಳ ಕಾಲ ಸಾಲ ಮರುಪಾವತಿಗೆ ಅವಕಾಶ ನೀಡಿದ ನಂತರ ಮತ್ತೆ ಈ ಅವಕಾಶವನ್ನು ಮತ್ತೆ 3 ತಿಂಗಳ ಕಾಲ ಮುಂದುವರೆಸಿ ಆದೇಶ ಮಾಡಿರುವುದು ಗೊತ್ತಿರುವ ವಿಚಾರ ಆದರೆ ಜಿಲ್ಲೆಯ ಸಹಕಾರ ಬ್ಯಾಂಕ್‍ಗಳಲ್ಲಿ ಪಡೆದಿರುವ ರೈತರ ಕೃಷಿ, ರೇಷ್ಮೇ, ಕೋಳಿ,ಕುರಿ ಸಾಕಾಣಿಕೆಗೆ ಪಡೆದಿರುವ ಸಾಲಕ್ಕೆ ನೋಟಿಸ್ ಜಾರಿ ಮಾಡಿ ಸಾಲ ಕಟ್ಟುವಂತೆ ಪದೇ ಪದೇ ಒತ್ತಡ ಹಾಕುತ್ತಿರುವುದರಿಂದ ಸಂಕಷ್ಟದಲ್ಲಿರುವ ರೈತರಿಗೆ ದಿಕ್ಕುತೋಚದಂತಾಗಿ ಸರ್ಕಾರದ ಆದೇಶ ಪತ್ರಿಕಾ ಮಾದ್ಯಮಗಳಿಗೆ ಸೀಮಿತವೇ ಸರ್ಕಾರ ಹಾಗೂ ಆರ್.ಬಿ.ಐ ಆದೇಶವನ್ನು ಉಲ್ಲಂಘನೆ ಮಾಡಿ ರೈತರಿಗೆ ನೋಟಿಸ್ ನೀಡುತ್ತಿರುವುದು ಯಾವ ನ್ಯಾಯ ಎಂಬುದು ರೈತರ ಪ್ರಶ್ನೆ ಬೆಳೆದ ಬೆಳೆಗಳಿಗೆ ಹಾಗೂ ರೇಷ್ಮೇ ಬೆಲೆ ಇದ್ದಿದ್ದರೆ ಪಡೆದಿರುವ ಸಾಲ ಹಿಂದಿರುಗಿಸಲು ನಾವು ರೆಡಿಯಾಗಿದ್ದೇವೆ, ನಮಗೆ ಕಾಲವಕಾಶ ಬೇಕಾಗಿದೆ ಎಂಬುದು ಸಂಬಂಧಪಟ್ಟ ಸಹಕಾರ ಬ್ಯಾಂಕ್ ಅಧಿಕಾರಿಗಳಿಗೆ ತಿಳಿದುಕೊಳ್ಳದೆ ಈ ರೀತಿ ಸಂಕಷ್ಟದಲ್ಲಿರುವ ರೈತರಿಗೆ ನೋಟಿಸ್ ನೀಡಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದರು.
ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಮಾತನಾಡಿ ಜಿಲ್ಲೆಯ ಜೀವನಾಡಿಯಾಗಿರುವ ಹಾಲು ಒಕ್ಕೂಟವನ್ನು ಉಳಿಸುವ ಜೊತೆಗೆ ಮೇಗಾ ಡೈರಿಗೆ ಹಣವನ್ನು ಬಿಡುಗಡೆ ಮಾಡಿ ಕಾಮಗಾರಿಯನ್ನು ಪ್ರಾರಂಭ ಮಾಡಬೇಕೆಂದು ಒತ್ತಾಯಿಸಿದರುಮನವಿ ಸ್ವೀಕರಿಸಿ ಮಾತನಾಡಿದ ಸಹಕಾರ ಸಚಿವರು ಕೋರೋನಾ ಹಾವಳಿಯ ಸಮಯದಲ್ಲಿ ರೈತರಿಗೆ ಆಗಿರುವ ತೊಂದರೆಗಳ ಬಗ್ಗೆ ಮಾಹಿತಿಯಿದೆ. ಆದರಂತೆ ಕೇಂದ್ರ ಸರ್ಕಾರ ಹಾಗೂ ಆರ್.ಬಿ.ಐ ಆದೇಶವನ್ನು ಎಲ್ಲಾ ಬ್ಯಾಂಕ್‍ಗಳು ಪಾಲನೆ ಮಾಡಬೇಕಾದ ನಿಯಮ ಆದರೆ ರೈತರಿಗೆ ನೋಟಿಸ್ ನೀಡುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ ನೋಟಿಸ್ ನೀಡಿರುವುದನ್ನು ಕೊಡಿ ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಮನವಿ ನೀಡುವಾಗ ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್, ಈಕಂಬಳ್ಳಿ ಮಂಜುನಾಥ್, ಐತಾಂಡಹಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ಮುಂತಾದವರಿದ್ದರು.
