ಕುಪ್ಪೆಪದವು: ಇಲ್ಲಿನ ಭಜನಾ ಮಂದಿರದ ಕಟ್ಟಡದಲ್ಲಿರುವ ಫ್ಯಾನ್ಸಿ ಅಂಗಡಿಯ ಕಿಟಕಿಯ ಸರಳುಗಳನ್ನು ತುಂಡು ಮಾಡಿ ಒಳ ನುಗ್ಗಿದ ಕಳ್ಳರು ನಗದು ಸಹಿತ ಬಟ್ಟೆಗಳನ್ನು ಕಳವು ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಸುಮಿತ್ರಾ ಎಂಬವರಿಗೆ ಸೇರಿದ ಸಿರಿ ಫ್ಯಾನ್ಸಿ &ಗಿಫ್ಟ್ ಸೆಂಟರ್ ನ ಹಿಂಭಾಗದ ಕಿಟಕಿಯ ಸರಳುಗಳನ್ನು ತುಂಡು ಮಾಡಿ ಒಳ ನುಗ್ಗಿದ ಕಳ್ಳರು ಅಂದಾಜು10 ಸಾವಿರ ನಗದು ಹಾಗೂ 7 ಸಾವಿರ ಮೌಲ್ಯದ ಮಹಿಳೆಯರ ಮತ್ತು ಮಕ್ಕಳ ಬಟ್ಟೆಗಳನ್ನು ಎಗರಿಸಿದ್ದಾರೆ.

ಅಂಗಡಿಯ ಹಿಂಭಾಗದ ಕಿಟಕಿಯು ಇಲ್ಲಿನ ಶಾಲೆಯ ಕಡೆಗಿದ್ದು ಕಳ್ಳರು ಶಾಲೆ ಕಂಪೌಂಡ್ ಮೂಲಕ ಬಂದು ಕಿಟಕಿಯ ಸರಳು ಮುರಿದು ಒಳ ನುಗ್ಗಿದ್ದಾರೆ.ಸುಮಿತ್ರಾ ಅವರು ಬುಧವಾರ ಬೆಳಿಗ್ಗೆ ಅಂಗಡಿ ತೆರೆದಾಗ ಕಳವು ಪ್ರಕರಣ ಗಮನಕ್ಕೆ ಬಂತು.

ಮಂಗಳವಾರ ರಾತ್ರಿ ಸುಮಾರು 12 ಗಂಟೆಗೆ ಯಾರೋ ಅಂಗಡಿ ಎದುರುಗಡೆ ಇರುವ ಮನೆಯ ಕಿಟಕಿ ಬಡಿದಿದ್ದು, ಪಂಚಾಯತ್ ನ ಪಂಪ್ ಆಪರೇಟರ್ ಯಾವಾಗಲೂ ಈ ರೀತಿ ಕಿಟಕಿ ಬಡಿದು ನೀರು ಬಂದ ಬಗ್ಗೆ ಸೂಚನೆ ಕೊಡುತ್ತಿದ್ದು, ಮಂಗಳವಾರವೂ ಅವರೇ ಕಿಟಕಿ ಬಡಿದಿರಬೇಕೆಂದು ಭಾವಿಸಿ ಮನೆ ಮಂದಿ ಬಾಗಿಲು ತೆರೆಯದೆ ಸುಮ್ಮನಿದ್ದರೆನ್ನಲಾಗಿದೆ.ಬಜಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಹತ್ತಿರದ ಸಿ ಸಿ ಟಿವಿ ದ್ರಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ.
