ಬಂಟ್ವಾಳ ತಾಲ್ಲೂಕಿನ ರಾಯಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನ ವಿರುದ್ಧ ಶ್ರಮಿಸುತ್ತಿರುವ ಆಸ್ಪತ್ರೆ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರಿಗೆ ಅರಳ ಜಿಎಚ್ಎಂ ಫೌಂಡೇಶನ್ ವತಿಯಿಂದ ಗ್ರಾ.ಪಂ.ಸದಸ್ಯ ಎಂ.ಬಿ.ಆಶ್ರಫ್ ಮತ್ತು ಎಂಡೋಸಲ್ಫಾನ್ ಸೆಲ್ ಜಿಲ್ಲಾ ಸಂಯೋಜಕ ಸಜೀಯುದ್ದೀನ್ ಇವರು ಉಚಿತ ಅಕ್ಕಿ ಮತ್ತು ದಿನಸಿ ಸಾಮಾಗ್ರಿ ಕಿಟ್ ವಿತರಿಸಿದರು. ಪ್ರಯೋಗಾಲಯ ತಂತ್ರಜ್ಞ ಬಸವರಾಜ್ ಮತ್ತಿತರರು ಇದ್ದರು.

