ಮಂಗಳೂರು: ದ.ಕ.ಜಿಲ್ಲಾದ್ಯಂತ ಲಾಕ್ ಡೌನ್ ನಿಂದಾಗಿ ಕ್ಷೌರಿಕ ವೃತ್ತಿ ಬಾಂಧವರು ಜೀವನ ನಿರ್ವಹಿಸಲು ಕಷ್ಟಪಡುತ್ತಿದ್ದು 3ನೇ ಬಾರಿಯ ಲಾಕ್ ಡೌನ್ ನಿಂದ ಮತ್ತಷ್ಟು ಹೀನಾಯ ಪರಿಸ್ಥಿತಿಗೆ ತಲುಪುತ್ತಿದೆ. ಈ ನಿಟ್ಟಿನಲ್ಲಿ ಕ್ಷೌರದಂಗಡಿಗಳನ್ನು ವಿಶೇಷ ಮಾನದಂಡಗಳನ್ನು ವಿಧಿಸಿ ಪ್ರಾರಂಭಿಸಲು ಅನುಮತಿ ಹಾಗು ಕ್ಷೌರಿಕ ಬಾಂಧವರಿಗೆ ಹಣಕಾಸು ಅಥವಾ ದಿನಸಿ ಸಾಮಾಗ್ರಿಗಳ ವಿಶೇಷ ಕಿಟ್ ಗಳನ್ನು  ನೀಡಲು  ಮನವಿ ಮಾಡಲಾಯಿತು.7aa461f2-7836-444d-873f-697b5f82ab6e

0b818937-a37d-4043-a951-a0bfaa66cf0dದ.ಕ ಜಿಲ್ಲೆಯ ಕ್ಷೌರಿಕರಿಗೆ ನೀಡುವಂತೆ ಕೋರಿ ಸೋಮವಾರ ಬೆಳಿಗ್ಗೆ ದ.ಕ.ಜಿಲ್ಲಾ ಸವಿತಾ ಸಮಾಜದ ವತಿಯಿಂದ ಜಿಲ್ಲಾಧ್ಯಕ್ಷರ ನಿಯೋಗವು ಮಾನ್ಯ ಸಂಸದ  ನಳಿನಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಜಿಲ್ಲಾಧ್ಯಕ್ಷರು ದೂರವಾಣಿ ಮೂಲಕ ಮಾತಾಡಿ ಅವರ ಆಪ್ತ ಕಾರ್ಯದರ್ಶಿಯವರ ಮೂಲಕ, ಮಾನ್ಯ ಜಿಲ್ಲಾಧಿಕಾರಿ ಶ್ರೀಮತಿ ಸಿಂಧೂ ಬಿ ರೂಪೇಶ್ ರವರನ್ನು  ಭೇಟಿಯಾಗಿ ಮನವಿ ನೀಡಲಾಯಿತು.c23c5c5d-53a5-4505-8008-cbd015f79f3a

21aeb0e5-5ddd-4383-a295-f0074da9adbe

ಜಲ್ಲಾಧಿಕಾರಿ ಹಾಗೂ ಸಂಸದರಿಂದ  ಧನಾತ್ಮಕ ಪ್ರತಿಕ್ರಿಯೆ ದೊರಕಿದೆ   ಕ್ಷೌರಿಕರು ಅನುಸರಿಸಬೇಕಾದ ಮಾನದಂಡಗಳು ಇನ್ನು ಅಂತಿಮಗೊಂಡಿಲ್ಲ. ಆದುದರಿಂದ ಮೇ ತಿಂಗಳ 17 ರ ಮುಂಚೆ ಸೆಲೂನ್ ಗಳನ್ನು ತೆರೆಯುವುದು ಅಸಾಧ್ಯದ ಮಾತು   ಆದರೂ ಆದಷ್ಟು ಬೇಗನೆ ಅನುಮತಿ ನೀಡುವಂತೆ  ವಿನಂತಿಸಲಾಯಿತು.

By suddi9

Leave a Reply

Your email address will not be published. Required fields are marked *