ಬಂಟ್ವಾಳ : ಕಂಟೈನ್ಮಂಟ್ ವಲಯದಿಂದ ಉದ್ದೇಶಪೂರ್ವಕವಾಗಿ ಮನೆಯಿಂದ ಹೊರಗೆ ಹೋಗಿದ್ದಾರೆಂಬ ಆರೋಪದಲ್ಲಿ  ವ್ಯಕ್ತಿಯೋರ್ವರ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ಎಸ್. ವಿ.ಎಸ್.ಶಾಲಾ ರಸ್ತೆಯ ನಿವಾಸಿ ವಿಜಯಾನಂದ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ.ಕೋವಿಡ್ 19 ಸೋಂಕಿನಿಂದ  ಸಾವನ್ನಪ್ಪಿದ ಮತ್ತು ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಂಟ್ವಾಳ ರಥಬೀದಿಯನ್ನು ಕಂಟೈನ್ಮೆಂಟ್ ವಲಯ ಎಂದು ಗುರುತಿಸಲಾಗಿದೆ.

ಈನಿಯಂತ್ರಿತ ಪ್ರದೇಶಕ್ಕೊಳಪಟ್ಟಿರುವ  ವ್ಯಕ್ತಿಗಳು ಯಾರು ಕೂಡ ಮನೆಯಿಂದ ಹೊರ ಬಾರದೆಂದು ಆದೇಶವಿದ್ದರೂ ವಿಜಯಾನಂದ ಎಂಬರು ಉದ್ದೇಶಪೂರ್ವಕವಾಗಿ ಕಾಲ್ನಡಿಗೆಯ ಮೂಲಕ ಮನೆಯಿಂದ  ಹೊರಹೋಗಿದ್ದಾರೆ ಎಂದು ಆರೋಪಿಸಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

By suddi9

Leave a Reply

Your email address will not be published. Required fields are marked *