ಬೆಳ್ತಂಗಡಿ: ಸ್ತ್ರೀಯರ ರಕ್ಷಣೆಗಾಗಿ ಮಹಿಳಾ ಶಕ್ತಿಯನ್ನು ಜಾಗೃತಗೊಳಿಸಲು, ಮಾತೆಯರ ಮಹಾ ಶಕ್ತಿ ಸಾಮಥ್ರ್ಯಗಳನ್ನು ಅನಾವರಣಗೊಳಿಸಲು ಅ. 10 ರಂದು ಬೆಳ್ತಂಗಡಿಯಲ್ಲಿ ನವ ಚಂಡೀಯಾಗವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ತಿಳಿಸಿದ್ದಾರೆ.
ಅವರು ಮಂಗಳವಾರ ಇಲ್ಲಿನ ತಾಲೂಕು ಮೈದಾನದಲ್ಲಿ ನಿಮರ್ಿಸಲಾಗುತ್ತಿರುವ ಯಾಗಶಾಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಯಾಗದ ವಿವರ ನೀಡಿದರು
ಯಾಗ ಮಂಟಪದಲ್ಲಿ 11 ಹೋಮಕುಂಡಗಳನ್ನು ರಚಿಸಲಾಗಿದ್ದು 1008 ಮುತೈದೆಯರಿಂದ ಪೂಣರ್ಾಹುತಿ ಅರ್ಪಣೆ ನಡೆಯಲಿದೆ. ಈ ಯಾಗ ಸಂಪೂರ್ಣ ಮಾತೆಯರಿಂದ, ಮಾತೆಯರಿಗಾಗಿ ನಡೆಯುವುದಾಗಿದೆ. ದಕ್ಷಿಣ ಭಾರತದಲ್ಲಿಯೇ ಇದು ಪ್ರಥಮ ಕಾರ್ಯಕ್ರಮವಾಗಿದ್ದು ಸುಮಾರು 10,000 ಮಂದಿ ಮಹಿಳೆಯರು ಸಹಿತ 25ಸಾವಿರ ಮಂದಿ ಭಕ್ತರು ಭಾಗವಹಿಸಲಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಯಾಗ ಪ್ರಾರಂಭವಾಗಿ 11-45ಕ್ಕೆ ಮುಗಿಯಲಿದೆ. ಚಿಕ್ಕಮಗಳೂರು ವೇದವಿಜ್ಞಾನ ಮಂದಿರದ ಕೆ.ಎಸ್.ನಿತ್ಯಾನಂದ ಮತ್ತು ಕೊಲ್ಲೂರು ಕ್ಷೇತ್ರದ ಪ್ರಧಾನ ಅರ್ಚಕ ಮಂಜುನಾಥ ಅಡಿಗ ಉಪಸ್ಥಿತರಿರುತ್ತಾರೆ ಎಂದರು.
ಪೂರಕ ಮಾಹಿತಿ ನೀಡಿದ ಪ್ರಜಾಪ್ರಭುತ್ವ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಅವರು ಧರ್ಮಸ್ಥಳದ ಸೌಜನ್ಯಾ ಮೃತಳಾಗಿ ಎರಡು ವರ್ಷವಾಯಿತು. ಅವಳ ಚೈತನ್ಯವೇ ಈ ಯಾಗವನ್ನು ಮಾಡಿಸುತ್ತಿದೆ. ಯಾರಿಗೂ ಕೆಡುಕು ಮಾಡುವ ಉದ್ದೇಶ ಈ ಯಾಗದ ಹಿಂದೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು ರಾಷ್ಟೀಯ ಹಿಂದೂ ಜಾಗರಣ ವೇದಿಕೆ, ಪ್ರಜಾಪ್ರಭುತ್ವ ವೇದಿಕೆ ಹಾಗೂ ನವಚಂಡೀಯಾಗ ಸಮಿತಿ ವತಿಯಿಂದ ನಡೆಯುತ್ತಿರುವ ಈ ಧಾಮರ್ಿಕ ಕಾರ್ಯಕ್ರಮದ ಪ್ರಚಾರಾರ್ಥವಾಗಿ ತಾಲೂಕಿನ ಎಲ್ಲಾ ಜಿಲ್ಲಾ ಪಂ.ಕ್ಷೇತ್ರಗಳಲಿ ಬೈಕ್ ರ್ಯಾಲಿಯನ್ನು ಮಾಡಲಾಗಿದೆ. ಯಾಗದ ದಿನವಾದ ಮಧ್ಯಾಹ್ನ 12 ಗಂಟೆಗೆ ನಡೆಯುವ ಸಂತ ಸಮಾಗಮದಲ್ಲಿ ಸುಬ್ರಹ್ಮಣ್ಯ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಬಾಳೆಕುದ್ರು ನೃಸಿಂಹಾಶ್ರಮ ಸ್ವಾಮೀಜಿ, ಗುರುದೇವಾನಂದ ಸ್ವಾಮೀಜಿ, ಈಶವಿಠಲದಾಸ ಸ್ವಾಮೀಜಿ, ಮೋಹನದಾಸ ಪರಮಹಂಸ ಸ್ವಾಮೀಜಿ, ಸಾಧ್ವಿ ಮಾತಾನಂದಮಯೀ, ಮುಕ್ತಾನಂದ ಸ್ವಾಮೀಜಿ, ಶಶಿಕಾಂತಮಣಿ ಸ್ವಾಮೀಜಿ, ಮೈತ್ರಿ ಸಮುದ್ಗದ ಮಹತ್ಪಿತ ಸ್ವಾಮೀಜಿ, ಸಾಧ್ವಿ ಗೀತಾನಂದಿನಿ ಮಾತಾಜಿ, ಧರ್ಮವ್ರತಾನಂದ ಸ್ವಾಮೀಜಿಯವರು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದರು.
ಸಮಿತಿ ಗೌರವಾಧ್ಯಕ್ಷ ವಕೀಲ ಭಾಸ್ಕರ ಹೊಳ್ಳ ಉಪಸ್ಥಿತರಿದ್ದರು.
