ಬೆಳ್ತಂಗಡಿ:ಕಪುಚಿನ್ ಕೃಷಿಕ ಸೇವಾ ಕೇಂದ್ರ ವತಿಯಿಂದ ವಿಮುಕ್ತಿ ಕಚೇರಿಯಲ್ಲಿ ಅ.14 ರಂದು ಬೆಳೆಗ್ಗೆ 10.30ಕ್ಕೆ ವಿವಿಧ ಸರಕಾರಿ ಅಧಿಕಾರಿಗಳೊಡನೆ ಸಮನ್ವಯ ಸಭೆಯು ನಡೆಯಲಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಶೈಕ್ಷಣಿಕ, ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿನ ಪ್ರಸ್ತುತ ಸ್ಥಿತಿಗತಿ ಹಾಗೂ ಅಭಿವೃದ್ಧಿ ಸಾಧಿಸುವ ಬಗ್ಗೆ ಸಂವಾದ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
