ವಿಜಯಪುರ : ತಾಲ್ಲೂಕಿನ ಜೀಗಜೇವಣಿ ಗ್ರಾಮ ಪಂಚಾಯ್ತಿ ತಮ್ಮ ಪೌರ ಕಾರ್ಮಿಕ ಸಿಬ್ಬಂದಿಯೊಂದಿಗೆ ಕರೋನಾ ಕೋವಿಡ್-19 ಹೆಮ್ಮಾರಿ ತಡೆಗಟ್ಟುವ ಮುಂಜಾಗ್ರತಾ ಕ್ರಮವಾಗಿ ಇಂದು ಗ್ರಾಮದಲ್ಲಿ ಕೊರೋನಾ ನಿಯಂತ್ರಕ ಔಷಧ ಸಿಂಪಡಣೆಯನ್ನು ಮಾಡಲಾಯಿತು.
ಗ್ರಾಮದಲ್ಲಿ ಸ್ವಚ್ಛತೆ ಪಾಲನೆಗೆ ಮೊದಲ ಆದ್ಯತೆ ನೀಡಲಾಗಿದೆ. ಕೋವಿಡ್-19 ವೈರಸ್ ತಡೆಗೆ ಪೂರಕವಾದ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಈಗ ಗ್ರಾಮದ ನಾಗರಿಕರ ಆರೋಗ್ಯ ದೃಷ್ಟಿಯಿಂದ ಎಲ್ಲ ವಾರ್ಡ್‌ಗಳಲ್ಲೂ ಔಷಧ ಸಿಂಪಡಣೆ ಮಾಡಲಾಯಿತು ಎಂದು ಗ್ರಾ.ಪಂ ಅಧ್ಯಕ್ಷರಾದ ಹಣಮಂತ್ರಾಯಗೌಡ ಪಾಟೀಲ್, ಅವರು ತಿಳಿಸಿದ್ದಾರೆ.
ಗ್ರಾಮದ ನಾಗರಿಕರು ಹಾಗೂ ಗ್ರಾಮಕ್ಕೆ ಬಂದು ಹೋಗುವ ಜನರು ಕೊರೊನಾ ನಿಯಂತ್ರಣಕ್ಕೆ ವಿಧಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು…ಗುಂಪು ಗುಂಪಾಗಿ ಓಡಾಡುವುದನ್ನು ನಿಲ್ಲಿಸಬೇಕು. ನೀವು ಬೇರೆ ಊರಗಳಿಗೆ ಹೋಗಬೇಡಿ… ನಿಮ್ಮವ್ರನ್ನು ಕರೆಸಬೇಡಿ… ಅಲ್ಲಿಯೇ ಸುರಕ್ಷಿತವಾಗಿ ಇರಲು ಸಲಹೆ ನೀಡಿ. ಮನೆಗಳಲ್ಲೆ ಇರಿ… ಮನೆಯಿಂದ ಹೊರಗಡೆ ಬರಬೇಡಿ… ಸಹಕರಿಸಿ ಎಂದು ನಾಗರಿಕರಿಗೆ ಮನವಿ ಮಾಡಿಕೊಂಡ್ರು.
ಈ ಸಂದರ್ಭದಲ್ಲಿ ತಾ.ಪಂ ಸದಸ್ಯರಾದ ಅಮಸಿದ್ದ ಬಲಗಾನೂರ, ಯುವ ಮುಖಂಡ ಕಾಸಿನಾಥ ಅಳಿಮಳ, ಗ್ರಾ.ಪಂ ಸದಸ್ಯ ರೇವಣಸಿದ್ದ ಕರ್ಲಮಳ, ರಾಜು ಜಾಧವ, ಶಿವಪ್ಪ ಇಚೂರ, ಮಾರುತಿ ಮೋರೆ, ಮಲಕು ಪಾಟೀಲ, ಡಾ. ವಿಜಯ, ಆಶಾ ಕಾರ್ಯಕರ್ತೆಯರಾದ ರೇಖಾ ಹಿರೇಮಠ, ಗುಂಡಕ್ಕ ಸರತಾಪೆ, ಸಿಬ್ಬಂದಿಗಳಾದ ವಿಠ್ಠಲ್ ಹೊನ್ನಮೋರೆ, ಶಿವಪ್ಪ ಲಾಡಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಶ್ರೀಕಾಂತ ಬಗಲಿ
