ಬೆಂಗಳೂರು : ಇನ್ಪೋಸಿಸ್‌ ಫೌಂಡೇಶನ್‌ ವತಿಯಿಂದ ಇಂದು ಬೆಂಗಳೂರು ಹೊರವಲಯದ ಜಿಗಣಿ ಗ್ರಾಮದ ಸಾವಿರಾರು ಕುಟುಂಬಗಳಿಗೆ ಜೀವನಾವಶ್ಯಕ ವಸ್ತುಗಳನ್ನು ವಿತರಿಸಲಾಯಿತು.917b44e5-c51e-49ba-b802-d651d9894a11

ಕರೋನಾ ಕರ್ಪ್ಯೂನಿಂದ ತೊಂದರೆಗೀಡಾಗಿರುವ ಕಾರ್ಮಿಕರು, ನಿರ್ಗತಿಕರು ಹಾಗೂ ಕೊಳೆಗೇರಿ ನಿವಾಸಿಗಳು ಸೇರಿದಂತೆ ಸಂತ್ರಸ್ತರಿಗೆ ಇಂದು ಜಿಗಣೀ ಪೋಲೀಸ್‌ ಠಾಣೆಯ ಬಳಿ ಜೀವನಾವಶ್ಯಕ ವಸ್ತುಗಳನ್ನು ವಿತರಿಸಲಾಯಿತು. ಜಿಗಣಿ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ವಿಶ್ವನಾಥ್‌ ಹಾಗೂ ಇನ್ಪೋಸಿಸ್‌ ಫೌಂಡೇಶನ್‌ ನ ಮ್ಯಾನೇಜರ್‌ ಚಂದ್ರು ಹಾಗೂ ಅವರ ತಂಡ ಸಾವಿರಕ್ಕೂ ಹೆಚ್ಚು ಜನರಿಗೆ ಅವಶ್ಯಕ ವಸ್ತುಗಳನ್ನು ಒಳಗೊಂಡಿರುವಂತಹ ಬಾಕ್ಸನ್ನು ವಿತರಿಸಿದರು. ಈ ಕಾರ್ಯದಲ್ಲಿ ಜಿಗಣಿ ಪೋಲೀಸ್‌ ಠಾಣೆಯ ಸಿಬ್ಬಂದಿಗಳು ಕೈಜೋಡಿಸಿದ್ದು ವಿಶೇಷವಾಗಿತ್ತು.

ಅಲ್ಲದೆ, ಮನೆ ಮನೆಗೂ ತೆರಳಿ ಜೀವನಾವಶ್ಯಕ ವಸ್ತುಗಳನ್ನು ಒಳಗೊಂಡಿರುವ ಬಾಕ್ಸ್‌ಗಳನ್ನೂ ವಿತರಿಸಲಾಯಿತು. ಸಾವಿರಕ್ಕೂ ಹೆಚ್ಚು ಜನರು ಈ ವಸ್ತುಗಳನ್ನು ಪಡೆದುಕೊಂಡರು. ಕರೋನಾ ಲಾಕ್‌ ಡೌನ್‌ ಪ್ರಾರಂಭದಿಂದಲೂ ಇನ್ಪೋಸಿಸ್‌ ಫೌಂಡೇಶನ್‌ ರಾಜ್ಯಾದ್ಯಂತ ಅಗತ್ಯ ಸಾಮಗ್ರಿಗಳನ್ನು ವಿತರಿಸುತ್ತಿದೆ. ಕಳೆದ ವಾರ ಸಿನೆಮಾ ರಂಗದ ಕಾರ್ಮಿಕರುಗಳಿಗೆ ಕಿಟ್‌ಗಳನ್ನು ವಿತರಿಸಲಾಗಿತ್ತು.

By suddi9

Leave a Reply

Your email address will not be published. Required fields are marked *