ಕುಪ್ಪೆಪದವು: ಮುತ್ತೂರು ಮತ್ತು ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ 11 ಕುಟುಂಬಗಳಿಗೆ,ಸರಕಾರದಿಂದ ಮಂಜೂರಾದ ಮಳೆ ಹಾನಿ ಪರಿಹಾರ ಧನದ ಚೆಕ್ ಗಳನ್ನು ಮತ್ತು ಮುತ್ತೂರು ಹಾಗೂ ಕುಳವೂರು ಗ್ರಾಮಗಳ ಸುಮಾರು 100 ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ಶಾಸಕ ಡಾ| ವೈ. ಭರತ್ ಶೆಟ್ಟಿ ಅವರು ಶನಿವಾರ ಮುತ್ತೂರು ಪಂಚಾಯತ್ ವಠಾರದಲ್ಲಿ ವಿತರಿಸಿದರು.

ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ, ಪಂ. ಅಧ್ಯಕ್ಷೆ ನಾಗಮ್ಮ, ಪಂಚಾಯತ್ ಸದಸ್ಯರಾದ ಸತೀಶ್ ಬಳ್ಳಾಜೆ, ಪ್ರವೀಣ್ ಆಳ್ವ ಗುಂಡ್ಯ, ಶ್ರೀಮತಿ ಮಮತಾ,, ಜಗದೀಶ್ ದುರ್ಗಾಕೊಡಿ, ತಾರಾನಾಥ್ ಕುಲಾಲ್, ಪಿಡಿಓ ಶ್ರೀಮತಿ ರಾಜೀವಿ, ಗ್ರಾಮಕರಣಿಕ ದೇವರಾಜ್, ಮಂಗಳೂರು ಉತ್ತರ ಬಿಜೆಪಿ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಪಕ್ಷದ ಪ್ರಮುಖರಾದ ರಾಜೇಶ್ ಕೊಟ್ಟಾರಿ, ಅಜಯ್ ಅಮೀನ್ ನಾಗಂದಡಿ, ಸಂತೋಷ್ ಆಳ್ವ ಕಂಗಿನಡಿ, ಕೆ.ಯಂ.ಸತೀಶ್, ಶಿವಾನಂದ, ಯೋಗೀಶ್, ಅಶೋಕ್ ಬಳ್ಳಾಜೆ, ರಿತೇಶ್ ಆಚಾರ್ಯ ಹಾಗೂ ಪಂಚಾಯತ್ ಸಿಬಂದಿಗಳು ಇದ್ದರು.
