ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ನೇತೃತ್ವದಲ್ಲಿ ಕರೋಪಾಡಿ,ಕೊಳ್ನಾಡು, ಸಾಲೆತ್ತೂರು,ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್-19 ತಡೆಗಾಗಿ ರಚನೆಗೊಂಡ ಟಾಸ್ಕ್ ಫೋರ್ಸ್ ಸದಸ್ಯರ ಸಭೆ ಶನಿವಾರ ನಡೆಯಿತು. 
ಈ ಸಂದರ್ಭ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಶಾಸಕರು ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.ಕರೋನ ವಿರುದ್ದ ಪ್ರತಿಯೊಬ್ಬರು ಪಕ್ಷಬೇಧ ಮರೆತು ಹೋರಾಡಬೇಕಾದ ಅನೀವಾರ್ಯತೆಯಿದ್ದು,ಯಾರಾದರೂ ಹಸಿವಿನಿಂದ ತೊಂದರೆಗೊಳಗಾದರೆ ಸ್ಥಳೀಯ ಕಾರ್ಯಪಡೆಯನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು ಎಚ್ಚರಿಸಿದರು.
ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ,ಉಪಾಧ್ಯಕ್ಷ ಅಬ್ಬಾಸ್ ಅಸಲಿ,ಜಿಪಂ ಸದಸ್ಯ ಎಂ.ಎಸ್.ಮಹಮ್ಮದ್ ,ತಹಶೀಲ್ದಾರ್ ಎಸ್ .ಆರ್.ರಶ್ಮೀ,ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ವಿವಿಧ ಗ್ರಾಪಂ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು,ಪಿಡಿಒಗಳು, ಗ್ರಾಮಕರಣಿಕರು,ಪ್ರಾ.ಆ.ಕೇ.ನಸ್೯ಗಳು ಮತ್ತಿರರು ಉಪಸ್ಥಿತರಿದ್ದರು.
ವಲಸೆ ಕಾರ್ಮಿಕರ ಭೇಟಿ:
ಇದಕ್ಕು ಮುನ್ನ ಶಾಸಕ ರಾಜೇಶ್ ನಾಯ್ಕ್ ಅವರು ಸಾಲೆತ್ತೂರು ಗ್ರಾಪಂ ನಲ್ಲಿ ಆಶ್ರಯ ಪಡೆದಿರುವ ವಲಸೆ ಕಾರ್ಮಿಕರನ್ನು ಭೇಟಿಯಾಗಿ ಯೋಗಕ್ಷೇಮವನ್ನು ವಿಚಾರಿಸಿದರು.ಎ.20 ರ ಬಳಿಕ ಸಣ್ಣಪುಟ್ಟ ಕಾಮಗಾರಿಯ ಕೆಲಸ ಮಾಡಲು ಅನುಮತಿ ಸೊಗುವ ಸಾಧ್ಯತೆ ಇದ್ದು,ಅದುವರೆಗೆ ಇಲ್ಲಿಯೇ ಇದ್ದು ,ಸಹಕರಿಸುವಂತೆ ಕಾರ್ಮಿಕರಿಗೆ ಸೂಚಿಸಿದರು.
