ವಾಮಂಜೂರು: ಮೂಡುಶೆಡ್ಡೆಯ ಸಂಜೀವಿನಿ ಸೇವಾ ಬಳಗ ಹಾಗೂ ದಾನಿಗಳ ಸಹಕಾರದೊಂದಿಗೆ ಸಂಗ್ರಹಿಸಲಾದ ಅಕ್ಕಿ ಮತ್ತು ದಿನಸಿ ಸೊತ್ತುಗಳ ಕಿಟ್ನ್ನು ಮೂಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ಮೂಡುಶೆಡ್ಡೆಯ 1000 ತೀರಾ ಬಡ ಕುಟುಂಬಗಳಿಗೆ ಶುಕ್ರವಾರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ತಾಪಂ ಸದಸ್ಯೆ ಕವಿತಾ ಡಿ, ರಮಾನಾಥ ಅತ್ತಾರ್, ಹರೀಶ್ ಮೂಡುಶೆಡ್ಡೆ, ಶಿವರಾಮ ಮಲ್ಲಿ, ಮಹೇಶ್ ಶೆಟ್ಟಿ, ಕೃಷ್ಣಪ್ಪ ಎಸ್, ದಿನೇಶ್, ಯುವರಾಜ್, ಅನಿಲ್ ಕುಮಾರ್, ದೀಪಕ್ ಮೂಡುಶೆಡ್ಡೆ ಮತ್ತಿತರರು ಉಪಸ್ಥಿತರಿದ್ದರು.
