ಬಂಟ್ಟಾಳ: ತಾಲೂಕು ಎಡ್ತೂರು ಎಂಬ ಪುಟ್ಟ ಊರಿನಲ್ಲಿ ಸುಮಾರು ೩ ವರ್ಷಗಳ ಹಿಂದೆ ಸಮಾನ ಮನಸಿನ ಹಿರಿಯರ ಮಾರ್ಗದರ್ಶನದಲ್ಲಿ ಯುವಕರ ತಂಡವೊಂಡು ಒಟ್ಟು ಸೇರಿ ರಚಿಸಿದ ಸಂಘಟನೆಯೇ ಶಾರದೋತ್ಸವ ಸೇವಾ ಸಮಿತಿ ಇರ್ವತ್ತೂರುಪದವು. ಈ ಸಮಿತಿ ಕೇವಲ ಉತ್ಸವಕ್ಕೆ ಸೀಮಿತವಾಗಿರದೇ ಪ್ರತಿ ವರ್ಷ ಕ್ರಿಡೋತ್ಸವ ಮುಕ್ತ ಕಬ್ಬಡ್ಡಿ ಪಂದ್ಯಾಟ ,ಉಚಿತ ಆರೋಗ್ಯ ಶಿಬಿರ,ರಕ್ತದಾನ ಶಿಬಿರ ದಂತ ಚಿಕಿತ್ಸ ಶಿಬಿರ ಹಾಗೂ ಕ್ಯಾನ್ಸರ್ ಮಾಹಿತಿ ಶಿಬಿರ, ಕೆಸರ್ಡ್ ಒಂಜಿ ದಿನ,ಹಾಗೂ ಬೃಹತ್ ಆಧಾರ್ ಮೇಳ,ಮೂಡಪಡುಕೋಡಿ ಶಾಲೆಯ ಅತಿಥಿ ಶಿಕ್ಷಕರ ವೇತನ ಹಾಗೂ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳಿಂದ ಜನಮೆಚ್ಚುಗೆ ಗಳಿಸಿದೆ.
ಕೊರೋನ ಎಂಬ ಮಹಾಮಾರಿಗೆ ಇಡೀ ದೇಶವೇ ಲಾಕ್ ಡೌನ್ ಅಗಿ ಇಂದು ಅನೇಕ ಬಡ ಕುಟುಂಬಗಳು ಕೂಲಿ ಕೆಲಸಕ್ಕೆ ಹೊಗದೇ ಕಂಗಲಾಗಿ ಊಟಕ್ಕೂ ಪರದಾಡುವ ಪರಿಸ್ಥಿತಿ ಬಂದ ಈ ಸಮಯದಲ್ಲಿಸಕಾಲದಲ್ಲಿ ಮಾಡುವ ಉಪಕಾರವೇ ಶ್ರೇಷ್ಠ ಸೇವೆ ಎಂಬ ಧ್ಯೇಯ ವಾಕ್ಯದೊಂದಿಗೆ ನಮ್ಮ ಶಾರದೋತ್ಸವ ಸಮಿತಿ ಇಂದು ನಮ್ಮ ನೆರೆಹೊರೆಯ ಗ್ರಾಮಗಳಾದ ಮೂಡುಪಡುಕೋಡಿ ಇರ್ವತ್ತೂರು,ಹಾಗೂ ಕುಡಂಬೆಟ್ಟು ಗ್ರಾಮದ 60ಕ್ಕೂ ಅಧಿಕ ಆಸಕ್ತ ಬಡ ಕುಟುಂಬಗಳನ್ನು ಗುರುತಿಸಿ, 10 ಕೆ.ಜಿ ಅಕ್ಕಿ ಹಾಗೂ ದಿನನಿತ್ಯದ ಅನಿವಾರ್ಯ ಸಾಮಗ್ರಿಗಳನ್ನು ನೀಡುವ ಮೂಲಕ ಬಡಜನರ ಕಣ್ಣಿರು ಒರೆಸುವಲ್ಲಿ ಅಳಿಲು ಸೇವೆ ಎಂಬತೆ ಜನಮೆಚ್ಚುಗೆ ಗಳಿಸಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುವಲ್ಲಿ ಯಶಸ್ವಿಯಾಗಿದೆ.
ಈ ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯಧ್ಯಕ್ಷ ಶಶಾಂಕ್ ಕ್ಯಾಶೂ ಇಂಡಸ್ಟ್ರೀಸ್ ಮಾಲಕ ಹರೀಂದ್ರ ಪೈ ಯುವ ಉದ್ಯಮಿ ಶೇಖರ್ ಪೂಜಾರಿ ಅಗಲ್ದೊಡಿ,ಮೋಹನ್ ಶೆಟ್ಟಿ ನರ್ವಲ್ದಡ್ಡ,ದಿನೇಶ್ ಶೆಟ್ಟಿ ಹರ್ಕಾಡಿ,ಬೂಬ ಪೂಜಾರಿ ಕುಂದ್ಕದೋಡಿ, ಎಂ.ಪಿ ಶೇಖರ್,ಮೆಲ್ಪತ್ತರ ಮೂಡುಪಡುಕೋಡಿ ಶಾಲೆಯ ಸಹಶಿಕ್ಷಕ ಸುನೀಲ್ ಸ್ವಿಕೇರಾ, ಇರ್ವತ್ತೂರು ಗ್ರಾ.ಪಂ ಅಧ್ಯಕ್ಷರು ಸುಜಾತಪ್ರಕಾಶ್,ಮೂಡುಪಡುಕೋಡಿ ಶಾಲಾಬಿವೃದ್ದಿ ಸಮಿತಿಯ ಅಧ್ಯಕ್ಷ ಶ್ರೀ ನಿವಾಸ್ ಪೂಜಾರಿ ಸೇವಾ, ಸಮಿತಿಯ ಪ್ರಮುಖರು ಇರ್ವತ್ತೂರು ಪಂಚಾಯತ್ ಉಪಾಧ್ಯಕ್ಷ ಶಂಕರ್ ಶೆಟ್ಟಿ ಬೆದ್ರಮಾರ್,ಸಮಿತಿಯ ಅಧ್ಯಕ್ಷರು ಡಾ.ರಾಮಕೃಷ್ಣ ಎಸ್, ಸಮಿತಿಯ ಕಾರ್ಯದರ್ಶಿ ದಯಾನಂದ ಎಸ್ ಎರ್ಮೆನಾಡು, ಕೋಶಾಧಿಕಾರಿ ಸುಪ್ರೀತ್ ಜೈನ್,ಉಪಾಧ್ಯಕ್ಷ ರಮೇಶ್ ಗೌಡ ಸೇವಾ ಪ್ರಶಾಂತ್ ದೇವಾಡಿಗ ಬೆನಕ ಶಾಮಿಯಾನದ ಮಾಲಕರು ಸತೀಶ್ ಬನತ್ತಕೋಡಿ,ಹಿರೇಂದ್ರ ಹಲೆಪ್ಪಾಡಿ ಹಾಗೂ ಕಾರ್ಯದರ್ಶಿ ಶಾರದೋತ್ಸವ ಸೇವಾ ಸಮಿತಿ ಇರ್ವತ್ತೂರುಪದವು ,ಸಮಿತಿಯ ಸರ್ವಸದಸ್ಯರು ಉಪಸ್ಥಿತರಿದ್ದರು.
