ಬಂಟ್ವಾಳ:  ದ.ಕ.ಜಿಲ್ಲೆಯಲ್ಲಿರುವ 108 ಅಂಬುಲೆನ್ಸ್ ವಾಹನ ಚಾಲಕ,ಸಿಬ್ಬಂದಿಗೆ ಊಟದ ಅಕ್ಕಿಯನ್ನು ವಿತರಣೆಗೆ ತುರ್ತುಕ್ರಮ ಕೈಗೊಳ್ಳುವಂತೆ ಬಂಟ್ವಾಳ ತಾಪಂ ಸದಸ್ಯ ಪ್ರಭಾಕರ ಪ್ರಭು ಅವರು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಮನವಿ ಮೂಲಕ ಒತ್ತಾಯಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊರ ಜಿಲ್ಲೆಗಳಿಂದ ಬಂದು 108 ಅಂಬುಲೆನ್ಸ್ ವಾಹನಗಳಲ್ಲಿ  ದುಡಿಯಿತ್ತಿರುವ   ಚಾಲಕ,ಆರೋಗ್ಯ ಸಿಬ್ಬಂದಿ ವರ್ಗದವರಿಗೆ ಊಟಕ್ಕೆ ಅಕ್ಕಿಯ ಸಮಸ್ಯೆಯಿಂದ ಪರದಾಡಿತ್ತಿರುವುದು ಗಮನಕ್ಕೆ  ಬಂದಿದ್ದು  ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಅವರಿಗೆ ಅಕ್ಕಿ ವಿತರಣೆಗೆ ಕ್ರಮಕೈಗೊಳ್ಳಲು ಸೂಚಿಸುವಂತೆ ಪ್ರಭಾಕರ ಪ್ರಭು ಮನವಿ ಮಾಡಿದ್ದಾರೆ.ಹಾಗೆಯೇ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರಿಗೂ ಮನವಿ ಮಾಡಿದ್ದಾರೆ.

By suddi9

Leave a Reply

Your email address will not be published. Required fields are marked *