ಬಂಟ್ವಾಳ:  ಜನತಾ ಕರ್ಫ್ಯೂನಿಂದ ಅಸಹಯಕರಾಗಿರುವ ಫರಂಗೀಪೇಟೆ ಸುತ್ತಮುತ್ತಲಿನ ಗ್ರಾಮಗಳ ಅಸಹಾಯಕ ಕುಟುಂಬಗಳಿಗೆ  ಫರಂಗಿಪೇಟೆ  ಸೇವಾಂಜಲಿ ಪ್ರತಿಷ್ಠಾನದಿಂದ ನಿರಂತರವಾಗಿ   ಪಡಿತರ ವಿತರಿಸುವ ಕಾರ್ಯ ನಡೆಯುತ್ತಿದೆ.

IMG-20200406-WA0054
ಫರಂಗಿಪೇಟೆ ಆಸುಪಾಸಿನ ತುಂಬೆˌ ಗೋವಿಂದತೋಟ, ನಡುಬೈಲು,ಧರ್ಮ ಗಿರಿ ಕುಂಪಣಮಜಲು ಪರಿಸರದ  ಬಡ ಕುಟುಂಬಗಳನ್ನು ಸೇವಾಂಜಲಿ ಪ್ರತಿಷ್ಠಾನದ ಕಾರ್ಯರ್ಕತರು ಗುರುತಿಸಿ ಬಂಟ್ವಾಳ ಜನ ಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ರೋ. ಪ್ರಕಾಶ್ ಕಾರಂತ ನರಿಕೊಂಬು ಮತ್ತು ಏರ್ಯ ಬಾಲಕೃಷ್ಣ ಹೆಗ್ಡೆ ಇವರ ಸಹಕಾರದೊಂದಿಗೆ  ಜೀವನಾಶ್ಯಕ ಪಡಿತರ  ವಸ್ತುಗಳನ್ನು ವಿತರಿಸಿದರು.
ಸೇವಾಂಜಲಿ ಪ್ರತಿಷ್ಠಾನದ ಪ್ರಮುಖರಾದ ಕೆ.ಜಿ.ವಿಠಲ ಆಳ್ವ ಕಿರಣ್ ಕ್ಯಾಟರರ್ಸ್ ,ಪ್ರಕಾಶ್ ಶೆಟ್ಟಿ ಶ್ರೀಶೈಲ ತುಂಬೆ, ಸೋಮಪ್ಪ ಕೋಟ್ಯಾನ್ ತುಂಬೆ, ಜಯರಾಜ್ ಕರ್ಕೇರ ಮಂಟಮೆˌ ಶೇಖರ ಪೂಜಾರಿ ಕಲ್ಲತಡಮೆ,ಪದ್ಮನಾಭ ಕುಲಾಲ್ ಗೋವಿಂದ ತೋಟ, ಬಿ ನಾರಾಯಣ ಬೆಳ್ಚಾಡ ಮೇರಮಜಲು, ಎಮ್. ಕೆ. ಖಾದರ್ ಮಾರಿಪಳ್ಳ, ದಿನಕರ್ ಕರ್ಕೇರಾ ಮಂಟಮೆ, ಸತೀಶ ಶೆಟ್ಟಿ ಕುಂಪಣಮಜಲುˌ ಸುರೇಶ್ ನಡುಬೈಲು ಗಿರೀಶ್ ಪದೆಂಜಾರು, ಎಫ್. ಗಣೇಶ ಫರಂಗಿಪೇಟೆˌ ಸುಕೇಶ ಶೆಟ್ಟಿ ತೇವುˌ ಸುಕುಮಾರ್ ಸಿಟಿ ಮೆಡಿಕಲ್ಸ್ ಫರಂಗಿಪೇಟೆˌ  ವಿಕ್ರಮ್ ಬರ್ಕೆ, ವಿದ್ಯಾ ಶಿವರಾಜ್ ಸುಜೀರು ಸಹಕರಿಸಿದರು.

By suddi9

Leave a Reply

Your email address will not be published. Required fields are marked *