ಬಂಟ್ವಾಳ: ಮಹಾಮಾರಿ ಕೊರೋನ ವಿರುದ್ದ ಸಮರ ಸಾರಿರುವ ಪ್ರಧಾನಿ ನರೇಂದ್ರಮೋದಿಯವರ ಭಾನುವಾರ ರಾತ್ರಿ 9 ಗಂಟೆಯಿಂದ 9 ನಿಮಿಷದವರೆಗೆ ದೀಪ ಬೆಳಗುವ ಕರೆಗೆ ಬಂಟ್ವಾಳದಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ದಂಪತಿ ಗಂಜಿಮಠದಲ್ಲಿರುವ ಒಡ್ಡೂರು ಫಾಮ್೯ನಲ್ಲಿರುವ ನಿವಾಸದಲ್ಲಿ ದೀಪ ಬೆಳಗಿಸಿ ಕೊರೋನ ಮುಕ್ತಿಗಾಗಿ ಮತ್ತು ಜನರ ಒಳಿತಿಗಾಗಿ ಪ್ರಾರ್ಥಿಸಿದರು.
ಬೆಳಗ್ಗಿನಿಂದಲೇ ಮನೆಮಂದಿ ಹಣತೆ,ದೀಪಗಳನ್ನು ಸಿದ್ದಪಡಿಸಿ ರಾತ್ರಿ 9 ಗಂಟೆಯ ಹೊತ್ತಿಗೆ ಮನೆಮುಂದೆ,ಟೆರೇಸ್ ಗಳಲ್ಲಿ ಜಾತಿ,ಮತ,ಬೇಧ ಮರೆತು ದೀಪ ಬೆಳಗಿ ಮೋದಿಯವರ ಕರೆಗೆ ನೈತಿಕ ಬೆಂಬಲ ವ್ಯಕ್ತಪಡಿಸಿದರಲ್ಲದೆ ಮೋದಿ,ಭಾರತಮಾತೆಗೆ ಜೈಕಾರ ಹಾಕಿದರು. ಪೊಳಲಿ ಕ್ಷೇತ್ರದ ಸಹಿತ ವಿವಿಧ ದೇವಾಲಯಗಳಲ್ಲು ಅರ್ಚಕರು ದೀಪ ಬೆಳಗಿಸಿ ಬೆಂಬಲ ವ್ಯಕ್ತಪಡಿಸಿದರು.
