ಕೈಕಂಬ :ಮಂಗಳವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆವರೆಗೆ ದಿನಸಿ ಅಂಗಡಿಗಳನ್ನು ತೆರೆದ ಸಮಯದಲ್ಲಿ, ಅಂಗಡಿ ಮುಂಗಟ್ಟುಗಳ ಎದುರು ಜನರು ಮುಗಿಬಿದ್ದು ದಿನಸಿ ಖರೀದಿಯಲ್ಲಿ ತೊಡಗಿದ್ದು ಕಂಡುಬಂತು, ಕೆಲವು ಕಡೇ ಸೋಷಿಯಲ್ ಡಿಸ್ಟೆನ್ಸ್ ಪಾಲಿಸಿದ್ದರೆ ಕೆಲವು ಕಡೇ ಜನ ಯಾವುದೇ ನಿಯಮಗಳನ್ನು ಪಾಲಿಸಲೇ ಇಲ್ಲ, ಗುರುಪುರ, ಕೈಕಂಬ, ಗಂಜಿಮಠ, ಎಡಪದವು, ಕುಪ್ಪೆಪದವು , ಪೊಳಲಿ, ಅಡ್ಡೂರು ಮುಂತಾದ ಭಾಗದಲ್ಲಿ ಅಂಗಡಿ, ಮೆಡಿಕಲ್, ತರಕಾರಿ ಅಂಗಡಿಗಳ ಮುಂದೆ ಜನಜಂಗುಳಿ ಕಂಡುಬಂತು.
ಜನ ಸೋಷಿಯಲ್ ಡಿಸ್ಟೆನ್ಸ್ ಪಾಲಿಸುವಂತೆನೋಡಿಕೊಳ್ಳಲು ಆಶಾ ಕಾರ್ಯಕರ್ತೆಯರು ಹರಸಹಾಸ ಪಡಬೇಕಾಯಿತು.ರಸ್ತೆಗಿಳಿಯದ ಟಾಸ್ಕ್ ಪೋರ್ಸ್: ಪಂಚಾಯತ್ ಮಟ್ಟದಲ್ಲಿ ರಚಿಸಲಾಗಿರುವ ಟಾಸ್ಕ್ ಪೋರ್ಸ್ ಗಳು ಕೆಲವು ಕಡೆ ರಸ್ತೆಗಿಳಿದಿದ್ದರೆ ಇನ್ನು ಕೆಲವು ಕಡೆ ನಾಪತ್ತೆಯಾಗಿವೆ.ಜನರಲ್ಲಿ ಜಾಗ್ರತಿ ಮೂಡಿಸಬೇಕಾದ ಪಂಚಾಯತ್ ಸದಸ್ಯರು ಕೆಲವರು ಪೇಟೆಗಳಲ್ಲಿ ಕಾಣಿಸಿಕೊಂಡರೆ ಕೆಲವರು ನಾಪತ್ತೆಯಾಗಿದ್ದರು.
