ಬಂಟ್ವಾಳ: ಕೊರೊನಾ ಹತೋಟಿಗೆ ಸರಕಾರ ವಿಧಿಸಿದ ನಿಯಮಗಳಿಗನುಸಾರವಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರವರ ಕಛೇರಿಯ ಸಹಾಯವಾಣಿ ಸಂದೇಶದಂತೆ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ವೃತ್ತಿಯಲ್ಲಿ ಟೈಲರ್ ಆಗಿರುವ ಬಿ.ಜೆ.ಪಿ.ಕಾರ್ಯಕರ್ತ ಸುನೀಲ್ ಶೆಟ್ಟಿಗಾರ್ ಅವರು ಮನೆಯಲ್ಲಿಯೇ ಕುಳಿತು ಮಾಸ್ಕ್ ಹೋಲಿದು ಜನ ಸಾಮಾನ್ಯರಿಗೆ ಉಚಿತವಾಗಿ ವಿತರಿಸಿದರು.
ಅವರ ಸಂಗಡಿಗರಾದ ದಿವಾಕರ ಶೆಟ್ಟಿಗಾರ್, ಚೆನ್ನಕೇಶವ ಶೆಟ್ಟಿಗಾರ್,,ರಮೇಶ್ ಶೆಟ್ಟಿಗಾರ್, ಜಾರಪ್ಪ ಶೆಟ್ಟಿಗಾರ್, ಗಂಗಾಧರ ಶೆಟ್ಟಿಗಾರ್, ಮಂಜುಳಾ, ಸುಗುಣ,ರೇಣುಕಾ,ಶಶಿಕಲಾ ರವರು ಸಹಕರಿಸಿದರು. ಇವರ ಸೇವಾ ಕಾರ್ಯಕ್ಕೆ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭುಅಭಿನಂದಿಸಿದ್ದಾರೆ.
