ಮಂಗಳೂರು:ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಡಾ.ರಾಜೇಶ್ವರೀ ದೇವಿ ಅವರನ್ನು ಸಾರ್ವಜನಿಕ ಹಿತದೃಷ್ಠಿಯಿಂದ ವರ್ಗಾವಣೆ ಗೊಳಿಸಿ ಸರ್ಕಾರದ ಆದೇಶ. ವೆನ್ಲಾಕ್ ನೂತನ ಅಧೀಕ್ಷಕರಾಗಿ ಬಂಟ್ವಾಳ ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸದಾಶಿವ ಅವರನ್ನು ನಿಯುಕ್ತಿಗೊಳಿಸಲಾಗಿದೆ. ರಾಜೇಶ್ವರಿ ದೇವಿಯನ್ನು ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಹುದ್ದೆ ವಹಿಸಲಾಗಿದೆ.
