ಬಂಟ್ವಾಳ: ಕೊರೋನಾ ಮಹಾಮಾರಿ ವಿರುದ್ಧ ಜನಜಾಗೃತಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಾ.22 ರ ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆಯ ವರೆಗೆ ಘೋಷಿಸಿರುವ ಜನತಾ ಕರ್ಪ್ಯೂಗೆ ಜನರು ಮನೆಯಲ್ಲಿಯೇ ಇದ್ದು ಸಹಕರಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಮನವಿ ಮಾಡಿದ್ದಾರೆ.
ಕೊರೋನಾ ವೈರಸ್ ವ್ಯಾಪಕವಾಗಿ ಹರಡುವಿಕೆಯನ್ನು ತಡೆಗಟ್ಟುವುದು ಮತ್ತು ಸಾರ್ವಜನಿಕರಲ್ಲಿ ಹೆಚ್ಚಿನ ಜನ ಜಾಗೃತಿ ಉಂಟು ಮಾಡುವ ದೃಷಿಯಿಂದ ಪ್ರಧಾನಿಯವರು ಜನತಾ ಕರ್ಪ್ಯೂಗೆ ಮನವಿ ಮಾಡಿಕೊಂಡಿದ್ದು, ಪ್ರಧಾನಮಂತ್ರಿಯವರ ಈ ಮನವಿಗೆ ಸಾರ್ವಜನಿಕರು ಸಂಪೂರ್ಣ ಸಹಕಾರವನ್ನು ನೀಡಬೇಕೆಂದು ಶಾಸಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆದ್ದಾರೆ.
