ಬಂಟ್ವಾಳ: ರಿಕ್ಷಾ ಡ್ರೈವರ್ ಅಸೋಸಿಯೇಶನ್( ರಿ.) ಬಂಟ್ವಾಳ ಇದರ 44 ನೇ ವಾರ್ಷಿಕ ಮಹಾಸಭೆ ಬಿ.ಸಿ.ರೋಡಿನ ರಿಕ್ಷಾ ಭವನದಲ್ಲಿ ನಡೆಯಿತು.ಅತಿಥಿಯಾಗಿ ಭಾಗವಹಿಸಿದ್ದ ಮೋಟಾರು ನಿರೀಕ್ಷಕ ಚರಣ್ ಅವರು ಮಾತನಾಡಿ, ಚಾಲಕರು ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಂಡು ವ್ಯವಹರಿಸಿದಾಗ  ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ಹೇಳಿದರು.
IMG-20200314-WA0023ಪ್ರತಿಯೊಬ್ಬರು ತಮ್ಮ ಜವಬ್ದಾರಿಯನ್ನು ಅರಿತುಕೊಂಡು ಬದುಕಬೇಕು ಎಂದ ಅವರ ಹಕ್ಕುಗಳ ಜೊತೆ ಕರ್ತವ್ಯಗಳ ಪಾಲನೆ ಇಂತಹ ಸಂಘಟನೆಗಳಿಂದ ಆಗಬೇಕಾಗಿದೆ, ದುಶ್ಚಟಗಳಿಂದ ದೂರವಿದ್ದು ಸಂಘಟನೆಯ ಮೂಲಕ ಸಾಮಾಜಿಕ ಚಟುವಟಿಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.ಸಂಘದ ಅಧ್ಯಕ್ಷ ನ್ಯಾಯವಾದಿ ರಾಜೇಶ್ ಬೊಳ್ಲುಕಲ್ಲು ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿ ಮಾತನಾಡಿ  ಸಮಾಜದಲ್ಲಿ ಜನರು ಸೇವಾ ಮನೋಭಾವನೆಯಿಂದ ಬದುಕು ಸಾಗಿಸಿದಾಗ ಮೌಲ್ಯಯುತವಾದ ಬದುಕು ಸಾಧ್ಯ ಎಂದರು. ಸಂಘದ ಉಪಾಧ್ಯಕ್ಷ ಹುಸೇನ್ ಉಪಸ್ಥಿತರಿದ್ದರು.ಹಿರಿಯ ರಿಕ್ಷಾ ಚಾಲಕ ದೇವರಾಜ ಆಚಾರ್ಯ ಅವರನ್ನು ಈ ಸಂದರ್ಭ ಗೌರವಿಸಲಾಯಿತು.ಖಜಾಂಚಿ ಕೃಷ್ಣಪ್ಪ ಲೆಕ್ಕಪತ್ರ ವಾಚಿಸಿದರು.ಕಾರ್ಯದರ್ಶಿ ಚಂದ್ರಶೇಖರ್ ಸ್ವಾಗತಿಸಿ, ವಂದಿಸಿದರು.

By suddi9

Leave a Reply

Your email address will not be published. Required fields are marked *