ಬಂಟ್ವಾಳ:ಕಳೆದ ಎರಡು ಅವಧಿಯಲ್ಲಿ ಅಮ್ಟಾಡಿ ಗ್ರಾಮ ಪಂಚಾಯಿತಿಗೆ ಗರಿಷ್ಟ ಮತಗಳಿಂದ ಆಯ್ಕೆಗೊಂಡು ಇಲ್ಲಿನ ಬಹುತೇಕ ರಸ್ತೆಗಳಿಗೆ ಕಾಂಕ್ರಿಟೀಕರಣಗೊಳಿಸಲಾಗಿದೆ. ಜನತೆಗೆ ಸರ್ಕಾರದಿಂದ ಸಿಗುವ ವಿವಿಧ ಸೌಲಭ್ಯ ದೊರಕಿಸಿ ಕೊಡಲು ಅವಿರತ ಶ್ರಮಿಸಿದ್ದು, ಮುಂದಿನ ದಿನಗಳಲ್ಲಿ ಮೂವರು ಸದಸ್ಯರು ಎಂದಿಗೂ ಚುನಾವಣೆಯಲ್ಲಿ ಸ್ಪರ್ಧಿಸದೆ ಜನಸೇವೆ ಮುಂದುವರಿಸುವುದಾಗಿ ಗ್ರಾ.ಪಂ.ಸದಸ್ಯ ಶೇಖರ ಶೆಟ್ಟಿ ಅಮ್ಟಾಡಿ ಹೇಳಿದ್ದಾರೆ.
ಇಲ್ಲಿನ ಅಮ್ಟಾಡಿ ಗ್ರಾಮದ ಪಚ್ಚಿನಡ್ಕ ಮಾತೃಭೂಮಿ ಗೆಳೆಯರ ಬಳಗವು ಶನಿವಾರ ರಾತ್ರಿ ಏರ್ಪಡಿಸಿದ್ದ 9ನೇ ವಾರ್ಷಿಕೋತ್ಸವ ಮತ್ತು ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಸ್ಥಳೀಯ ಪಡೆಂಕಿಲಮಾರು ಅಯ್ಯಪ್ಪ ಭಕ್ತ ವೃಂದದ ವತಿಯಿಂದ ನಾಗರಿಕ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಗ್ರಾಮ ಪಂಚಾಯಿತಿಗೆ ಸದಸ್ಯರಾಗಿ ಯುವ ಜನತೆ ಬರಬೇಕು ಎಂಬ ಉದ್ದೇಶ ನಮ್ಮದು. ನಾವು ಎಂದಿಗೂ ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿಯೇ ಉಳಿಯುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.ಇದೇ ವೇಳೆ ನಿವೃತ್ತಿ ಘೋಷಿಸಿದ ಗ್ರಾ.ಪಂ.ಸದಸ್ಯರಾದ ಬಬಿತಾ ಕೋಟ್ಯಾನ್ ಮತ್ತು ಚಂದ್ರಾವತಿ ನಾಯ್ಕ್ ಅನಿಸಿಕೆ ವ್ಯಕ್ತಪಡಿಸಿದರು.ಸ್ಥಳೀಯ ಉದ್ಯಮಿ ಕೆ.ಸೇಸಪ್ಪ ಕೋಟ್ಯಾನ್, ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಜಗದೀಶ ನೆತ್ರಕೆರೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್, ವಕೀಲ ಅರುಣ್ ರೋಶನ್ ಡಿಸೋಜ, ಮಂಗಳೂರು ಶ್ರೀರಾಮ ಸೇನೆ ಮುಖಂಡ ಹರೀಶ ಅಮ್ಟಾಡಿ, ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ತಾ.ಪಂ.ಸದಸ್ಯ ಯಶವಂತ ಪೊಳಲಿ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಶೆಟ್ಟಿ ಬಟ್ಟತ್ತೋಡಿ, ವಕೀಲ ಪ್ರದೀಪ್ ಎನ್.ಕೆ., ಗುತ್ತಿಗೆದಾರ ಯಶೋಧರ ಪೊಳಲಿ, ಉದ್ಯಮಿ ಉಮೇಶ ಸಾಲ್ಯಾನ್, ಪ್ರಮುಖರಾದ ರತ್ನಾಕರ ಶೆಟ್ಟಿ ಕಲ್ಲಡ್ಕ, ಭುವನೇಶ್ ಪಚ್ಚಿನಡ್ಕ, ಆನಂದ ಶಂಭೂರು, ನರಸಿಂಹ ಶೆಟ್ಟಿ ಮಾಣಿ ಮತ್ತಿತರರು ಇದ್ದರು.
—
