ಬಂಟ್ವಾಳ : ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರಮಂಡಳಿಯ ಸದಸ್ಯರು ಅಭಿನಯಿಸುವ ದಿನಕರ ಭಂಡಾರಿ ಕಣಂಜಾರು ಅವರ ರಚನೆಯ ಒಯಿಕ್ಕ್‍ಲಾ ಕಾಸ್ ಬೋಡು ತುಳು ನಾಟಕದ ಮುಹೂರ್ತ ಕಾರ್ಯಕ್ರಮ ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಿತು.

IMG-20200309-WA0083
ದೇಗುಲದ ಪ್ರ. ಅರ್ಚಕ ಅನಂತ ಭಟ್ ಅವರು ಪ್ರಾರ್ಥನೆ ಸಲ್ಲಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಮಿತ್ರ ಮಂಡಳಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಗೌರವಾಧ್ಯಕ್ಷ ಮೋಹನ ಸಾಲ್ಯಾನ್ ಹೆಗ್ಡೆಬೆಟ್ಟು, ಪದಾ„ಕಾರಿಗಳಾದ ರಾಜೇಂದ್ರ ಕೆ.ವಿ., ಮಂಜಪ್ಪ ಮೂಲ್ಯ, ಜಯರಾಜ ಅತ್ತಾಜೆ, ದಿನಕರ ಶೆಟ್ಟಿ ಅಂಕದಳ, ಹರೀಶ್ಚಂದ್ರ ಶೆಟ್ಟಿಗಾರ್, ಪ್ರವೀಣ್ ಶೆಟ್ಟಿ ಕುರ್ಡುಮೆ, ವಿಕ್ಟರ್ ಡಿಸೋಜ, ಮೇಧಾವಿ ಮಡಂತ್ಯಾg, ಸಂತೋಷ್ ಮೂರ್ಜೆ, ಸಚಿನ್ ಅತ್ತಾಜೆ, ನಾಟಕ ನಿರ್ದೇಶಕ ರತ್ನದೇವ್ ಪುಂಜಾಲಕಟ್ಟೆ, ಮತ್ತಿತರರಿದ್ದರು. ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ 38ನೇ ಮತ್ತು ಶ್ರೀ ಮುರುಘೇಂದ್ರ ವನಿತಾ ಸಮಾಜದ 25ನೇ ವಾರ್ಷಿಕೋತ್ಸವ ಪ್ರಯುಕ್ತ ಎ.18ರಂದು ನಾಟಕ ಪ್ರದರ್ಶನ ನಡೆಯಲಿದೆ.

By suddi9

Leave a Reply

Your email address will not be published. Required fields are marked *