ಕುಪ್ಪೆಪದವು: ಕುಳವೂರು ಪುನ್ಕೆದಡಿ ಅಂಗನವಾಡಿ ಕೇಂದ್ರದಲ್ಲಿ 20 ವರ್ಷಗಳಿಂದ ಅಂಗನವಾಡಿ ಸಹಾಯಕಿಯಾಗಿ ಕಾರ್ಯನಿರ್ವಹಿಸಿ ಇತ್ತೀಚೆಗೆ ನಿವೃತ್ತರಾದ ಶ್ರೀಮತಿ ಮೋನಮ್ಮ ಅವರನ್ನು, ಕುಳವೂರು ಫ್ರೆಂಡ್ಸ್ ವತಿಯಿಂದ ಆದಿತ್ಯವಾರ ಅಭಿನಂಧಿಸಿ ಬೀಳ್ಕೊಡಲಾಯಿತು, ‘
ಮುತ್ತೂರು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಾಗಮ್ಮ, ಸದಸ್ಯರುಗಳಾದ ಸತೀಶ್ ಪೂಜಾರಿ ಬಳ್ಳಾಜೆ, ಪ್ರವೀಣ್ ಆಳ್ವ ಗುಂಡ್ಯ, ಜಗದೀಶ್ ದುರ್ಗಕೋಡಿ, ಮಂಗಳೂರು ಉತ್ತರ ಯುವ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಆಳ್ವ, ಮುಖಂಡರಾದ ದಯಾನಂದ ಶೆಟ್ಟಿ, ಸಂತೋಷ್ ಆಳ್ವ, ಕುಳವೂರು ಫ್ರೆಂಡ್ಸ್ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

