ಸರ್ಕಾರಿ ಪ್ತಥಮ ದರ್ಜೆ ಕಾಲೇಜು, ವಾಮದಪದವಿನ ರಾಷ್ಟ್ರೀಯ ಸೇವಾ ಯೋಜನೆ, ಆಂತರಿಕ ಗುಣಮಟ್ಟ ಭರವಸಾ ಕೋಶ, ಮಹಿಳಾ ದೌರ್ಜನ್ಯ ತಡೆ ಸಮಿತಿ ಹಾಗೂ ಮಂಗಳೂರು ಇನ್ಸ್‍ಟಿಟ್ಯೂಟ್ ಆಫ್‍ಓಂಕಾಲಜೀ ಸ್ಪೆಷಾಲಿಟಿ ಆಸ್ಪತ್ರೆ ಪಂಪ್‍ವೆಲ್ ಮಂಗಳೂರು ಶಾರದೋತ್ಸವ ಸೇವಾ ಸಮಿತಿ, ಇರ್ವತ್ತೂರು ಪದವು ಇವುಗಳ ಜಂಟಿ ಆಶ್ರಯದಲ್ಲಿ ‘ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ’ವನ್ನು ಆಯೋಜಿಸಲಾಯಿತು. ಡಾ. ಶ್ರೀನಾಥ್ ಬಾಳಿಗ, ಸಂಶೋಧನಾ ಮೇಲ್ವಿಚಾರಕರು, ಎಂ.ಐ.ಓ. ಪಂಪ್‍ವೆಲ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಪನ್ಮೂಲ ವ್ಯಕ್ತಿಯ ನೆಲೆಯಲ್ಲಿ ಕ್ಯಾನ್ಸರ್ ರೋಗಕ್ಕೆ ಕಾರಣಗಳು, ಲಕ್ಷಣಗಳು ಯಾವ ರೀತಿಯಲ್ಲಿ ರೋಗವನ್ನು ಪತ್ತೆ ಹಚ್ಚಿಗುಣಪಡಿಸಬಹುದು ಜನರು ರೋಗ ಬರದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

cancer jagrathi photo
ಡಾ. ರಾಮಕೃಷ್ಣಎಸ್.,ಅಧ್ಯಕ್ಷರು,ಶಾರದೋತ್ಸವ ಸೇವಾ ಸಮಿತಿ, ಇರ್ವತ್ತೂರುಇವರು ಪ್ರಾಸ್ತವಿಕವಾಗಿ ಮಾತನಾಡಿಶಾರದೋತ್ಸವ ಸೇವಾ ಸಮಿತಿಯು ಸಮಾಜಮುಖಿಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹರಿಪ್ರಸಾದ್ ಬಿ.ಶೆಟ್ಟಿಇವರು ವಹಿಸಿ, ಉತ್ತಮ ಹಾಗೂ ಗುಣಮಟ್ಟದಜೀವನಕ್ರಮ ಹಾಗೂ ಆಹಾರ ಸೇವನೆಯ ಮೂಲಕ ಕ್ಯಾನ್ಸರ್‍ನಿಂದದೂರವಿರಬಹುದುಎಂದರು.ಶ್ರೀ ರಾಜೇಶ್ ಶೆಟ್ಟಿ, ಮೆಡಿಕಲ್, ಸೋಷಿಯಲ್ ವರ್ಕರ್, ಶ್ರೀ ದುರ್ಗಾಪ್ರಸಾದ್ ಅಡಪ, ಸಾರ್ವಜನಿಕ ಸಂಪರ್ಕಾಧಿಕಾರಿ, ಶ್ರೀ. ಶಂಕರ ಶೆಟ್ಟಿ, ಉಪಾಧ್ಯಕ್ಷರು, ಇರ್ವತ್ತೂರು ಗ್ರಾಮ ಪಂಚಾಯತ್ ಶ್ರೀ. ನಿತೇಶ್‍ಚಂದ್ರ, ಐ.ಟಿ. ಮೇಲ್ವಿಚಾರಕರು, ಶ್ರೀ. ಜಗದೀಶ್, ಡಾ. ರವಿ ಎಂ.ಎನ್.,ಐಕ್ಯೂಎಸಿ ಸಂಚಾಲಕರು, ಪ್ರೊ. ಚಂದ್ರಿಕಾ ನಾಯಕ್‍ಯು, ಮಹಿಳಾ ದೌರ್ಜನ್ಯತಡೆ ಸಮಿತಿ, ಪ್ರೊ. ಕೃಷ್ಣಮೂರ್ತಿಎನ್. ಬಿ., ಇತಿಹಾಸ ವಿಭಾಗ ಮುಖ್ಯಸ್ಥರು, ಶ್ರೀ. ದಯಾನಂದ ಹಳೆ ವಿದ್ಯಾರ್ಥಿ, ಡಾ.ಮೇರಿ ಎಂ. ಜೆ. ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರೊ. ರೊನಾಲ್ಡ್ ಪ್ರವೀಣ್ ಕೊರೆಯ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸ್ವಾಗತಿಸಿದರು. ಕು. ಸವಿತಾ ಮತ್ತು ಕು. ಶ್ವೇತಾ ನಾಯಕ್ ಪ್ರಾರ್ಥಿಸಿದರು., ಕು. ಯಶಸ್ವಿನಿ ವಂದಿಸಿದರು, ಕು.ಸಂಗೀತಾ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *