ಕೈಕಂಬ:ಊರಿನ ದೇವಸ್ಥಾನಗಳು ಜೀರ್ಣೋದ್ದಾರಗೊಂಡು ವೃದ್ಧಿಯಾದರೆ ಊರು ವೃದ್ಧಿಯಾಗಿ ಸುಭಿಕ್ಷೆಯಿಂದ ಕೂಡಿರುತ್ತದೆ ಎಂದು ಬಲ್ಯೊಟ್ಟು ಮಠದ ಪರಮಪೂಜ್ಯ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹೇಳಿದ್ದಾರೆ.ಅವರು ಮಂಗಳವಾರ ಕುಪ್ಪೆಪದವು ಶ್ರೀ ದುರ್ಗೇಶ್ವರೀ ದೇವಿ ದೇವಸ್ಥಾನದಲ್ಲಿ, ದೇವಸ್ಥಾನದ ಜೀರ್ಣೋದ್ದಾರದ ಕುರಿತಂತೆ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

20200302_181703ನಾವು ದೇವಸ್ಥಾನಗಳ ಮುಂದೆ ಹಾದು ಹೋದಾಗ ನಮ್ಮ ಕೈಗಳು ತನ್ನಿಂತಾನೇ ದೇವರಿಗೆ ನಮಿಸುತ್ತವೆ ಆ ಸಂದರ್ಭದಲ್ಲಿ ನಮ್ಮಲ್ಲಿ ಹೊಸ ಚೈತನ್ಯವೊಂದು ಮೂಡುತ್ತದೆ ನಮ್ಮ ಬೆಂಗಾವಲಾಗಿ ಯಾರೋ ಇದ್ದಾರೆ ಎನ್ನುವ ಭದ್ರತೆಯ ಭಾವ ನಮ್ಮಲ್ಲಿ ಉಂಟಾಗುತ್ತದೆ,ಆದುದರಿಂದ ದೇವಾಲಯಗಳು ಜೀರ್ಣೋದ್ದಾರಗೊಂಡು ಸುಸ್ಥಿತಯಲ್ಲಿರಬೇಕು ಭಕ್ತರು ಒಗ್ಗಟ್ಟಾದರೆ ಜೀರ್ಣೋದ್ದಾರ ಕಾರ್ಯ ಕಷ್ಟದ ಕೆಲಸವಲ್ಲ,ಎಲ್ಲರೂ ಒಗ್ಗಟ್ಟಿನಿಂದ ದೇವಸ್ಥಾನದ ನವೀಕರಣದ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳೋಣ ಎಂದರು ಅಜಿತ್ ಕುಮಾರ್ ಜೈನ್ ಕುಪ್ಪೆಪದವು ಅವರ ಅಧ್ಯಕ್ಷತೆಯಲ್ಲಿ ಜೀರ್ಣೋದ್ದಾರ ಸಮಿತಿಯನ್ನು ರಚಿಸಲಾಯಿತು.ದೇವಳದ ಮ್ಯಾನೇಜಿಂಗ್ ಟ್ರಸ್ಟಿ ಪ್ರವೀಣ್ ಕುಮಾರ್ ಜೈನ್ ಅಗರಿ,ಟ್ರಸ್ಟಿಗಳಾದ ಉಮೇಶ್ ಅಮೀನ್ ನಾಗಂದಡಿ,ತುಳಸೀದಾಸ್ ಅಮೀನ್ ಮುಂಬಾಯಿ,ಪುರುಷೋತ್ತಮ್ ಕೆ, ವಿಕ್ರಮ್ ಕೆ. ಚಂದ್ರಹಾಸ್ ಶೆಟ್ಟಿ ಮುತ್ತೂರು,ಸಂಜೀವ ಶೆಟ್ಟಿ ನಡುಗುಂಡ್ಯ,ರಾಮಣ್ಣ ನಾಯ್ಕ್ ಕಿಲೆಂಜಾರು,ಶ್ರೀಮತಿ ವಸಂತಿ ಅಗರಿ,ಮತ್ತು ಅರ್ಚಕರಾದ ಸದಾಶಿವ ಕಾರಂತ್,ಹಾಗೂ ಕಿಲೆಂಜಾರು,ಕುಳವೂರು,ಮುತ್ತೂರು ಗ್ರಾಮಗಳ ಹಿರಿಯರು,ಮುಖಂಡರುಗಳು,ದುರ್ಗೇಶ್ವರೀ ಸೇವಾ ಸಮಿತಿಯ ಅಧ್ಯಕ್ಷರು,ಪದಾಧಿಕಾರಿಗಳು,ಭಕ್ತರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.ಶಿವರಾಮ ಕಾರಂತ ಅವರು ಸ್ವಾಗತಿಸಿ ಸಭೆಯನ್ನು ನಡೆಸಿಕೊಟ್ಟರು.ಅಮಿತ್ ಸಹಕರಿಸಿದರು.

By suddi9

Leave a Reply

Your email address will not be published. Required fields are marked *