ಕೈಕಂಬ,:ಬಂಟ್ವಾಳ ತಾಲೂಕಿನ. ಕರಿಯಂಗಳ ಗ್ರಾಮದ ಪೊಳಲಿ ಮಾಗಣೆಗೆ ಸೇರಿದ ಮಂಗಾಜೆ ಕೋರ್ದಬ್ಬು ದೈವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಮಂಗಾಜೆ ಕೋರ್ದಬ್ಬು ದೈವ ಮತ್ತು ಪರಿವಾರ ದೈವಗಳ ಬಾಲಾಲಯ ಪ್ರತಿಷ್ಠೆ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮವು ಮಾ.4 ರಂದು ಬುಧವಾರ ಬೆಳಗ್ಗೆ 7.45 ಕ್ಕೆ ನಡೆಯಲಿದೆ.ಎಂದು ಕೋರ್ದಬ್ಬು ದೈವಸ್ಥಾನದ ಪ್ರಕಟನೆ ತಿಳಿಸಿದೆ.

