ಬಂಟ್ವಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ ಇದರ ವಾರ್ಷಿಕ ಕ್ರೀಡಾಕೂಟವು ಫೆ.29 ರಂದು ಪೂರ್ವಾಹ್ನ 9.30ಕ್ಕೆ ಉದ್ಘಾಟನೆಗೊಂಡಿತು.ಈ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದ ಎಸ್‍ಡಿಎಂ ಕಾಲೇಜು ಮಂಗಳೂರು ಇದರ ನಿವೃತ್ತ ದೈಹಿಕ ಶಿಕ್ಷಣ ನಿರ್ದೆಶಕರಾದ ಶ್ರೀ ಭರತ್ ಕುಮಾರ್ ಜೈನ್‍ರವರು ವಿದ್ಯಾರ್ಥಿಗಳು ಕ್ರೀಡೆಗಳ ಮೂಲಕ ದೈಹಿಕ ಸಾಮಥ್ರ್ಯವನ್ನು ವೃದ್ಧಿಸಿಕೊಳ್ಳಬೇಕು ಇದರಿಂದ ಮಾನಸಿಕ ಆರೋಗ್ಯ ಹಾಗೂ ಬೌದ್ಧಿಕ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು. ವಿದ್ಯಾರ್ಥಿಗಳು ಕ್ರೀಡೆಗಳ ಮೂಲಕ ರಾಷ್ಟ್ರಮಟ್ಟಗಳಲ್ಲಿ ಗುರುತಿಸಲ್ಪಡುವಂತಾಗಲಿ ಎಂದು ಶುಭ ಹಾರೈಸಿದರು.

IMG_20200229_095350
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸೌಮ್ಯ ಹೆಚ್.ಕೆ ಸೋಲು ಗೆಲುವುಗಳು ಸಹಜ. ಸೋಲನ್ನು ಸಹಜವಾಗಿ ಸ್ವೀಕರಿಸಿ ಕ್ರೀಡಾಸ್ಪೂರ್ತಿಯಲ್ಲಿ ಭಾಗವಹಿಸಿ ಕ್ರೀಡೋತ್ಸವವನ್ನು ಯಶಸ್ವಿಯಾಗಿಸಲು ಕರೆ ನೀಡಿದರು.ನಿವೃತ್ತ ಶಿಕ್ಷಕರಾದ ಶ್ರೀ ನಾರಾಯಣ ನಾಯಕ್‍ರವರು ಧ್ವಜಾರೋಹಣ ನೆರವೇರಿಸಿದರು. ಕ್ರೀಡಾ ಸಂಚಾಲಕರಾದ ಕಾಲೇಜಿನ ಗ್ರಂಥಪಾಲಕರಾದ ಡಾ. ಶ್ರೀನಿವಾಸ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ನಸೀಮಾ ಬೇಗಂ ಎಸ್, ಶ್ರೀ ದೇವಿಪ್ರಸಾದ್, ಶ್ರೀ ಹನುಮಂತಯ್ಯ ಜಿ.ಹೆಚ್ ಹಾಗೂ ಶ್ರೀ ವಿನಯ್ ಎಂ.ಎಸ್ ಹಾಗೂ ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು. ಸೈಂಟ್ ಪ್ಯಾಟ್ರಿಕ್ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ಸೃಜನ್‍ರವರು ಕ್ರೀಡೆಗಳನ್ನು ನಡೆಸಿಕೊಟ್ಟರು. ಕು. ರಕ್ಷಾ ಪ್ರಾರ್ಥಿಸಿ, ಕು. ಸ್ವಾತಿ ಸ್ವಾಗತಿಸಿ, ಕ್ರೀಡಾ ಕಾರ್ಯದರ್ಶಿಯಾದ ಅಭಿಜಿತ್ ವಂದಿಸಿದ ಕಾರ್ಯಕ್ರಮವನ್ನು ಪ್ರಜ್ವಲ್ ನಿರೂಪಿಸಿದರು. ವಿದ್ಯಾರ್ಥಿಗಳು ಪಥಸಂಚಲನದ ಮೂಲಕ ಅತಿಥಿಗಳಿಗೆ ಗೌರವ ಸೂಚಿಸಿದರು.

By suddi9

Leave a Reply

Your email address will not be published. Required fields are marked *